ಅಚಾತುರ್ಯದಿಂದ ಕ್ಷಿಪಣಿ ಪಾಕಿಸ್ತಾನದ ಕಡೆಗೆ ಹಾರಿದೆ – ರಾಜನಾಥ್ ಸಿಂಗ್
ಇತ್ತೀಚೆಗೆ ಪಾಕಿಸ್ತಾನ ಗಡಿಯೊಳಗೆ ಅಚಾತುರ್ಯದಿಂದ ಕ್ಷಿಪಣಿ ಉಡಾವಣೆಯಾದ ಘಟನೆ ಕುರಿತು ರಾಜ್ಯಸಭೆಯಲ್ಲಿಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವರ ನೀಡಿದರು. ಕ್ಷಿಪಣಿ ಘಟಕದ ವಾಡಿಕೆಯ ನಿರ್ವಹಣೆ ವೇಳೆ ಮಾರ್ಚ್ 9ರಂದು ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ಕ್ಷಿಪಣಿ ಪಾಕಿಸ್ತಾನ ಗಡಿಯೊಳಗೆ ಹಾರಿ ಬಿದ್ದಿದೆ. ಆಕಸ್ಮಿಕವಾಗಿ ನಡೆದ ಈ ಘಟನೆ ವಿಷಾದನೀಯ ಎಂದು ಸಚಿವರು ತಿಳಿಸಿದರು.
ಘಟನೆಯಲ್ಲಿ ಯಾವುದೇ ನಷ್ಟ ಸಂಭವಿಸಿಲ್ಲ. ಆದರೂ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ಔಪಚಾರಿಕ ತನಿಖೆಗೆ ಆದೇಶ ನೀಡಿದೆ. ತನಿಖೆ ನಂತರ ಘಟನೆಯ ಪೂರ್ಣ ವಿವರ ಹೊರಬೀಳಲಿದೆ ಎಂದು ಅವರು ತಿಳಿಸಿದರು.
ಶಸ್ತ್ರಾಸ್ತ್ರ ನಿರ್ವಹಣೆ ಮತ್ತು ಸುರಕ್ಷತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಯಾವುದೇ ಅಚಾತುರ್ಯ ಘಟನೆಯನ್ನು ಕ್ಷಿಪ್ರವಾಗಿ ಬಗೆಹರಿಸಲು ಬದ್ಧವಾಗಿದೆ. ಭಾರತೀಯ ಯೋಧರು ಶಸ್ತ್ರಾಸ್ತ್ರ ನಿರ್ವಹಣೆಯಲ್ಲಿ ಉನ್ನತ ತರಬೇತಿ ಹೊಂದಿದ್ದು, ಅತ್ಯುತ್ತಮ ಅನುಭವ ಹೊಂದಿದ್ದಾರೆ ಎಂದು ಸಚಿವರು ವಿವರಿಸಿದರು