ಕೇಂದ್ರ ಬಜೆಟ್ 2021 ಹೈಲೆಟ್ಸ್ : ರೈಲ್ವೇ ಇಲಾಖೆಗೆ 1,10,055 ಕೋಟಿ ರೂ.
ನವದೆಹಲಿ: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಮಡಿಸಿದ ಕೇಂದ್ರ ಬಜೆಟ್ 2021ರಲ್ಲಿ ಅನೇಕ ಮಹತ್ವದ ಯೋಜನೆಗಳನ್ನ ಘೋಷಣೆ ಮಾಡಲಾಗಿದೆ. ಅದ್ರಂತೆ ರೈಲ್ವೇ ಇಲಾಖೆಗೆ 1,10,055 ಕೋಟಿ ರೂ ಅನುದಾನ ಮೀಸಲಿಡಲಾಗಿರೋದಾಗಿ ಸೀತಾರಾಮನ್ ಅವರು ಘೋಷಣೆ ಮಾಡಿದ್ದಾರೆ.
ಸಂಸತ್ ನಲ್ಲಿ ಇಂದು ಕೇಂದ್ರ ಆಯವ್ಯಯ 2021ನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, ರೈಲ್ವೇ ಇಲಾಖೆಗೆ 1,10,055 ಕೋಟಿ ರೂ ಅನುದಾನ ಮೀಸಲಿಟ್ಟಿದ್ದು. ಕಳೆದ ಬಾರಿಯ ರೈಲ್ವೇ ಬಜೆಟ್ ಗಿಂತ 40,055 ಕೋಟಿ ರೂ ಹೆಚ್ಚಿನದ್ದು ಎಂದು ಹೇಳಿದರು. ಕಳೆದ ವರ್ಷ ರೈಲ್ವೇ ಇಲಾಖೆಗೆ 70,000 ಕೋಟಿ ರೂ ಮೀಸಲಿಡಲಾಗಿತ್ತು. ನಾನು ರೈಲ್ವೆಗಾಗಿ 1,10,055 ಕೋಟಿ Rs. ದಾಖಲೆಯ ಹಣ ನೀಡುತ್ತಿದ್ದೇನೆ. ಅದರಲ್ಲಿ 1,07,100 ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮಾತ್ರ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಅಂತೆಯೇ ರೈಲ್ವೇಗಾಗಿ ಮೀಲಿಟ್ಟಿರುವ ಬಜೆಟ್ ನಲ್ಲಿ ನಾಲ್ಕು ಹೊಸ ರೈಲ್ವೆ ಕಾರಿಡಾರ್ ಯೋಜನೆಗಳ ಘೋಷಣೆ ಮಾಡಿದರು.
ಬಜೆಟ್ ಹೈಲೆಟ್ಸ್ : 75 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಟ್ಯಾಕ್ಸ್ ಫ್ರೀ..!
46,000 ಕಿ.ಮೀ. ಈ ವರ್ಷ ಬ್ರಾಡ್ಗೇಜ್ ಹಳಿ ಪರಿವರ್ತನೆ ಘೋಷಣೆ ಮಾಡಲಾಗಿದ್ದು, ಭವಿಷ್ಯಕ್ಕೆ ಸಿದ್ಧವಾಗಿರುವ ರೈಲ್ವೆ ವ್ಯವಸ್ಥೆಯನ್ನು ನಾವು ರೂಪಿಸುತ್ತೇವೆ. ಜೂನ್ 2022ರ ಒಳಗೆ ಎರಡು ಕಾರಿಡಾರ್ ಪೂರ್ಣಗೊಳಿಸುತ್ತೇವೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೆಲ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








