ನವದೆಹಲಿ: 2021ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಕೊರೊನಾ ಲಸಿಕೆಗಾಗಿ ಸರ್ಕಾರ 35 ಸಾವಿರ ಕೋಟಿ ರೂ.ಗಳನ್ನು ಮೀಸಲು ಇರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ 2021ನೇ ಸಾಲಿನ ಆಯವ್ಯಯ ಮಂಡಿಸಿದ ನಿರ್ಮಲಾ, ಈ ವರ್ಷ ದೇಶವಾಸಿಗಳಿಗೆ ಕೊರೊನಾ ಲಸಿಕೆ ನೀಡಲು 35 ಸಾವಿರ ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಈ ಅನುದಾನವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಳೆದ ವರ್ಷ ಆರೋಗ್ಯ ಕ್ಷೇತ್ರಕ್ಕೆ 92 ಸಾವಿರ ಕೋಟಿ ನೀಡಲಾಗಿತ್ತು. ಆದರೆ, ಈ ವರ್ಷ 2.23ಲಕ್ಷ ಕೋಟಿ ನೀಡುವ ಮೂಲಕ ಈ ಮೊತ್ತ ಶೇ.137ರಷ್ಟು ಹೆಚ್ಚಳವಾಗಿದೆ ಎಂದರು.
ಶೀಘ್ರವೇ ಎರಡು ದೇಶಿಯ ಲಸಿಕೆ ಲಭ್ಯ
ಸದ್ಯ ಭಾರದಲ್ಲಿ ಕೊರೊನಾಗೆ ಎರಡು ಲಸಿಕೆಗಳು ಲಭ್ಯವಿದೆ. ಭಾರತ ಸೇರಿದಂತೆ ನೂರಕ್ಕೂ ಎಚ್ಚು ರಾಷ್ಟ್ರಗಳು ಇದರ ಲಾಭ ಪಡೆಯುತ್ತಿವೆ. ಮುಂದಿನ ದಿನಗಳಲ್ಲಿ ದೇಶಿಯಾ ನಿರ್ಮಿತ 2 ಲಸಿಕೆಗಳು ಪ್ರಯೋಗದ ಹಂತದಲ್ಲಿವೆ. ಶೀಘ್ರವೇ ಜನರ ಬಳಕೆಗೆ 2 ಲಸಿಕೆಗಳು ಲಭ್ಯವಾಗಲಿವೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel