ನವದೆಹಲಿ: ಕೇಂದ್ರ ಸರ್ಕಾರದ 2021ನೇ ಸಾಲಿನ ಹಣಕಾಸು ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ವರ್ಷದ ಬಜೆಟ್‍ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಕೊರೊನಾದಿಂದಾಗಿ ದೇಶ ಹಾಗೂ ವಿಶ್ವ ಹಿಂದೆಂದೂ ಕಾಣದ ಆರೋಗ್ಯ ಸಂಕಷ್ಟಕ್ಕೆ ಸಿಲುಕಿತು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಈ ಸಾಳಿನ ಬಜೆಟ್‍ನಲ್ಲಿ 2.23 ಲಕ್ಷ ಕೋಟಿ ರು,ಗಳನ್ನು ಬಜೆಟ್‍ನಲ್ಲಿ ನೀಡಲಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಬಜೆಟ್‍ನಲ್ಲಿ ಮೊದಲ ಆದ್ಯತೆ ನೀಡಿದ್ದು, ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಎದುರಿಸಲು 2.23 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ.
ರಾಷ್ಟ್ರೀಯ ಆರೋಗ್ಯ ಮಿಷನ್‍ಗೆ ಹೆಚ್ಚುವರಿಯಾಗಿ 65.180 ಕೋಟಿ ನೀಡಿರುವ ನಿರ್ಮಲಾ ಸೀತಾರಾಮನ್, ದೇಶಾದ್ಯಂತ 17 ಸಾವಿರ ಗ್ರಾಮೀಣ ವೆಲ್‍ನಸೆಸ್ ಸೆಂಟರ್ ಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರ ಸ್ಥಾಪನೆ ಮೂಲಕ ಮುಂದಿನ ದಿನಗಳಲ್ಲಿ ಎದುರಾಗುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಈ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ಉನ್ನತ ಮಟ್ಟದ ಲ್ಯಾಬ್‍ಗಳನ್ನು ಆರಂಭಿಸುತ್ತೇವೆ. ರಾಷ್ಟ್ರೀಯ ಆರೋಗ್ಯ ಶಿಕ್ಷಣ ಸಂಸ್ಥೆಗಳನ್ನು ಬಲಗೊಳಿಸಲು 112 ಜಿಲ್ಲೆಗಳಲ್ಲಿ ಪೌಷ್ಠಿಕತೆ ವೃದ್ಧಿಗೆ ಆದ್ಯತೆ, 9 ಬಯೋಸೇಫ್ಟಿ ಲ್ಯಾಬ್ ಸ್ಥಾಪನೆಗಳನ್ನು ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.
ಆತ್ಮನಿರ್ಭರ್ ಭಾರತ್ ಜಪ ಮಾಡಿದ ನಿರ್ಮಲಾ
2021ನೇ ಸಾಲಿನ ಬಜೆಟ್ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್, ತಮ್ಮ ಬಜೆಟ್‍ನ್ನು ಆತ್ಮನಿರ್ಬರ್ ಭಾರತದ ಜಪ ಮಾಡಿದ್ದಾರೆ. ಕೊರೊನಾದಿಂದ ಲಾಕ್‍ಡೌನ್ ಮಾಡಿದ ವೇಳೆ 5 ಮಿನಿ ಬಜೆಟ್ ಮಂಡನೆ ಮಾಡುವ ಮೂಲಕ ಸಂಕಷ್ಠದಲ್ಲಿದ್ದ ಜನರಿಗೆ ಆರ್ಥಿಕ ನೆರವು ನೀಡಲಾಯಿತು.
ಲಾಕ್‍ಡೌನ್ ವೇಳೆ ಪ್ರಧಾನಿ ಗರೀಬ್ ಕಲ್ಯಾಣ್ ಯೋಜನೆ ಘೋಷಣೆ ಮಾಡಿ ಉದ್ಯೋಗ ಕಳೆದುಕೊಂಡ ದೇಶದ 80ಕೋಟಿ ಬಡವರಿಗೆ ಅನುಕೂಲ ಮಾಡಿಕೊಡಲಾಯಿತು.
ಹಿಂದೆಂದೂ ಇಲ್ಲದ ಸಂಕಷ್ಟ ಪರಿಸ್ಥಿತಿಯಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದೇನೆ. ಆತ್ಮನಿರ್ಭರ್ ಭಾರತ್ ಯೋಜನೆ ಮೂಲಕ 27.1 ಲಕ್ಷ ಕೋಟಿ ಪ್ಯಾಕೇಜ್ ನೀಡಲಾಗಿದೆ. ಇದರಿಂದ ರೈತರು, ದೀನ ದಲಿತರು, ಕೂಲಿ ಕಾರ್ಮಿಕರು, ಬುಡಕಟ್ಟು ಜನರಿಗೆ ಅನುಕೂಲವಾಗಿದೆ. ದೇಶದ ಜಿಡಿಪಿಯ ಶೇ.30ರಷ್ಟನ್ನು ಪ್ಯಾಕೇಜ್ ಮೂಲಕ ನೀಡಲಾಗಿದೆ ಎಂದು ತಿಳಿಸಿದರು.
ವಿಜ್ಞಾನಿಗಳಿಗೆ ಧನ್ಯವಾದ
ಹೆಮ್ಮಾರಿಗೆ ಕೊರೊನಾಗೆ ಲಸಿಕೆ ಕಂಡು ಹಿಡಿದ ವಿಜ್ಞಾನಿಗಳಿಗೆ ಧನ್ಯವಾದ ತಿಳಿಸಿದ ನಿರ್ಮಲಾ ಸೀತಾಮಾರನ್, ಮುಂದಿನ ಕೆಲವೇ ದಿನಗಳಲ್ಲಿ ಸ್ವದೇಶಿ ನಿರ್ಮಿತ 2 ಲಸಿಕೆಗಳು ಲಭ್ಯವಾಗಲಿವೆ. ಆಸ್ಟ್ರೇಲಿಯಾ ವಿರುದ್ಧ ಸೋಲಿಸಿದ ಟೀಂ ಇಂಡಿಯಾಗೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಅಭಿನಂದನೆ ಸಲ್ಲಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel