Queen Elizabeth II – ಬ್ರಿಟೀಷ್ ರಾಣಿ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ವೈದ್ಯರು..
ಬ್ರಿಟಿಷ್ ರಾಣಿ ಕ್ವೀನ್ ಎಲಿಜಬೆತ್-2 ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಅವರು ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರಲು ವೈದ್ಯಕೀಯ ತಂಡ ಶಿಫಾರಸು ಮಾಡಿದೆ. ಈ ವಿವರಗಳನ್ನು ಬಕಿಂಗ್‌ಹ್ಯಾಮ್ ಅರಮನೆ ಗುರುವಾರ ಬಹಿರಂಗಪಡಿಸಿದೆ.
96 ವರ್ಷ ವಯಸ್ಸಿನ ರಾಣಿ ಎಲಿಜಬೆತ್-II ಕಳೆದ ವರ್ಷ ಅಕ್ಟೋಬರ್‌ನಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರು ನಿಲ್ಲಲು ಮತ್ತು ನಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಬುಧವಾರ ನಡಯಬೇಕಾಗಿದ್ದ ಖಾಸಗಿ ಕೌನ್ಸಿಲ್ ಸಭೆಯನ್ನು ರದ್ದುಗೊಳಿಸಿದರು.
ಕ್ವೀನ್ ಪರಿಸ್ಥಿತಿ ಆರೋಗ್ಯವಾಗಿಲ್ಲ ಎಂದು ಬಕಿಂಗ್ಹ್ಯಾಮ್ ಅರಮನೆಯ ಹೇಳಿಕೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಲಿಜ್ ಟ್ರಸ್, ಸುದ್ದಿ ಕೇಳಿ ಇಡೀ ದೇಶವೇ ಬೆಚ್ಚಿಬಿದ್ದಿದೆ ಎಂದು ಹೇಳಿದ್ದಾರೆ. “ಈ ಊಟದ ಸಮಯದಲ್ಲಿ ಬಕಿಂಗ್ಹ್ಯಾಮ್ ಅರಮನೆಯಿಂದ ಬಂದ ಸುದ್ದಿಯಿಂದ ಇಡೀ ದೇಶವು ತೀವ್ರವಾಗಿ ವಿಚಲಿತವಾಯಿತು. “ಈ ಸಮಯದಲ್ಲಿ ನನ್ನ ಆಲೋಚನೆಗಳು ಮತ್ತು ಇಡೀ ಯುನೈಟೆಡ್ ಕಿಂಗ್‌ಡಮ್‌ನ ಆಲೋಚನೆಗಳು ಹರ್ ಮೆಜೆಸ್ಟಿ ಕ್ವೀನ್ ಮತ್ತು ಅವರ ಕುಟುಂಬದೊಂದಿಗೆ ಇವೆ” ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಲಿಜ್ ಟ್ರಸ್ ಅವರನ್ನು ಬ್ರಿಟನ್ ಪ್ರಧಾನಿಯಾಗಿ ಮಂಗಳವಾರ ಕ್ವೀನ್ ಎಲಿಜಬೆತ್ ನೇಮಕ ಮಾಡಿದರು. ಸ್ಕಾಟ್ಲೆಂಡ್‌ನ ಬಲ್ಮೋರಲ್ ಎಸ್ಟೇಟ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.