ಗಡಿ ದಾಟಿ ಭಾರತಕ್ಕೆ ನುಸುಳಿರುವ 15 ಸಾವಿರಕ್ಕೂ ಹೆಚ್ಚು ಜನ – ಗುಟೆರಸ್
ಮ್ಯಾನ್ಮಾರ್ ನಲ್ಲಿ ಮಿಲಿಟರಿ ದಂಗೆ ವೇಳೆ ಅಲ್ಲಿನ ಸಾವಿರಾರು ಜನ ನೆರೆ ದೇಶಗಳಿಗೆ ಪರಾರಿಯಾಗಿದ್ದಾರೆ. ಥೈಲ್ಯಾಂಡ್ , ಚೀನಾ ಹಾಗೂ ಭಾರತದೊಳಗೆ ಮ್ಯಾನ್ಮಾರ್ ನಾಗರಿಕರು ಒಳಸುಳಿದ್ದಾರೆ. ಈ ಪೈಕಿ ಗಡಿದಾಟಿ ಭಾರತಕ್ಕೆ ಸುಮಾರು 15000 ಕ್ಕೂ ಹೆಚ್ಚು ಜನ ಪ್ರವೇಶ ಮಾಡಿರೋದಾಗಿ ವಿಶ್ವಸಂಸ್ಥೆ ಮುಖ್ಯಸ್ಥ ಅಂಟೊನಿಯೊ ಗುಟೆರಸ್ ಹೇಳಿದ್ದಾರೆ.
ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸರ್ಕಾರ ರಚನೆಯಾದ ಬಳಿಕ ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸಲ್ಮಾನರು ಮತ್ತು ಇತರೆ ಅಲ್ಪಸಂಖ್ಯಾತರ ಸ್ಥಿತಿ ಶೀರ್ಷಿಕೆ ಕುರಿತಾದ ವರದಿಯ ಬಗ್ಗೆ ಮಾತನಾಡಿರುವ ಗುಟೆರಸ್ ಫೆಬ್ರವರಿ 1ಕ್ಕೂ ಮುನ್ನ ಸುಮಾರು 3,36,000ಕ್ಕೂ ಹೆಚ್ಚು ಜನ ಮ್ಯಾನ್ಮಾರ್ ಬಿಟ್ಟು ಓಡಿಹೋಗಿದ್ದರು. ನಂತರ ಹಿಂಸಾಚಾರ ಘಟನೆಗಳು ಹೆಚ್ಚಿದಂತೆ ಸುಮಾರು ಮತ್ತೆ ಸುಮಾರು 2,20,000 ಜನರು ಗುಳೆ ಹೋಗಿದ್ದು, ಈ ಪೈಕಿ ಭಾರತಕ್ಕೆ ಸುಮಾರು 15 ಸಾವಿರ ಜನ ನುಸುಳಿದ್ದಾರೆ. ಇನ್ನೂ ಥೈಲ್ಯಾಂಡ್ ಗೆ 7,000 ಜನರು ಹೋಗಿದ್ದಾರೆ ಎಂದು ಹೇಳಿದ್ದಾರೆ.








