ಚಿನ್ನ – ಬೆಳ್ಳಿ ಆಭರಣ ಖರೀದಿದಾರರಿಗೆ ಸಿಹಿ ಸುದ್ದಿ..!
ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಗ್ಯಾಸ್ , ಪೆಟ್ರೋಲ್ , ಡೀಸೆಲ್ ಅಡುಗೆ ಎಣ್ಣೆ ದುಬಾರಿಯಾಗಿದ್ದು, ಮಧ್ಯಮವರ್ಗದ ಜನರು , ಬಡವರು ಪರದಾಡುವಂತಾಗಿದೆ.
ಈ ನಡುವೆ ಅಷ್ಟೋ ಇಷ್ಟೋ ಸೇವಿಂಗ್ ಮಾಡಬೇಕು ಚಿನ್ನ ಖರೀದಿಸಬೇಕು ಅಂತ ಯೋಚಿಸುತ್ತಿರುವ ಜನರಿಗೆ ಇದೀಗ ಒಂದು ಗುಡ್ ನ್ಯೂಸ್ ಸಿಕ್ಕಿದೆ.
ಚಿನ್ನದ ಬೆಲೆ ಕಡಿಮೆಯಾಗಿದ್ದು, ಚಿನ್ನ ಖರೀದಿ ಮಾಡುವ ಯೋಜನೆ ಹೊಂದಿರುವವರಿಗೆ ಇದು ಸೂಕ್ತ ಸಮಯವಾಗಿದೆ. ಚಿನ್ನದ ಬೆಲೆ ಇಳಿಕೆಗೊಂಡಿದೆ.
ಚಿತ್ರರಂಗಕ್ಕೆ ಹಿಡಿದಿದ್ದ ಗ್ರಹಣ ಮುಕ್ತಾಯ : ಇಂದಿನಿಂದ ಕರ್ನಾಟಕ ಫುಲ್ ಓಪನ್
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,200 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 49,310 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 1850 ರೂಪಾಯಿ ಇಳಿಕೆಗೊಂಡು 58,600 ರೂಪಾಯಿ ದಾಖಲಾಗಿದೆ.
ಬೆಂಗಳೂರಿನಲ್ಲಿ 22ಕ್ಯಾರೆಟ್ ಚಿನ್ನ ರೂ. 43,050 ಆಗಿದೆ. ಅಂದ್ರೆ 150 ರೂ. ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನ ರೂ. 46,960 ಆಗಿದ್ದು, 170 ರೂ. ಇಳಿಕೆಯಾಗಿದೆ. ಇನ್ನೂ ಬೆಳಿಯ ದರ 58,600 ರೂಪಾಯಿಯಾಗಿದೆ.
ಚೆನೈನಲ್ಲಿ2 2ಕ್ಯಾರೆಟ್ ಚಿನ್ನ ರೂ. 43,400 ಆಗಿದೆ. ಅಂದ್ರೆ 100 ರೂ. ಇಳಿಕೆಯಾಗಿದೆ. 24ಕ್ಯಾರೆಟ್ ಚಿನ್ನ ರೂ. 47,350 ಆಗಿದೆ. ಅಂದ್ರೆ 110 ರೂ. ಇಳಿಕೆಯಾಗಿದೆ. ಬೆಳ್ಳಿ ದರ 58,600 ರೂಪಾಯಿಯಾಗಿದೆ.