ಯಾವುದೇ ವಿಷಯದಲ್ಲಾಗಲಿ “ನೀವು ಕನಸು ಕಂಡರೆ, ಅದನ್ನ ಕನಸು ನನಸು ಮಾಡಬಹುದು,” ಎಂಬ ಮಾತಿದೆ ಈ ಮಾತಿಗೆ ತಕ್ಕ ನಿದರ್ಷನದಂತೆ Minecraft ನ ಅಧಿಕೃತ ವೆಬ್‌ಸೈಟ್ ನ ಗೇಮ್ ನಲ್ಲಿ ಆಟಹಾರ ರೋಬ್ಬರು ಇದನ್ನು ನಿರೂಪಿಸಿ ತೋರಿಸಿದ್ದಾರೆ.
ಆಟಗಾರರು ಸಾಮಾನ್ಯವಾಗಿ ಈ ಆಟದಲ್ಲಿ ವಿಭಿನ್ನ ವಿಷಯಗಳನ್ನು ನಿರ್ಮಿಸುವ ಮೂಲಕ ತಮ್ಮ ಸೃಜನಶೀಲತೆಯನ್ನು ತೋರಿಸುತ್ತಾರೆ.
ChrisDaCow ಎಂಬ ಹೆಸರಿನ YouTuber, ಆಟದೊಳಗೆ ಬ್ರಹ್ಮಾಂಡವನ್ನು ಮರುಸೃಷ್ಟಿಸುವ ಮೂಲಕ ಸೃಜನಶೀಲತೆಯ ಪ್ರದರ್ಶನವನ್ನು ಮಾಡಿದ್ದು ಇಲ್ಲಿ ಕ್ರೀಯೆಟಿವಿಯನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಆಟಗಾರರ ಈ ರಚನೆಯೂ ಈ ವೀಡಿಯೊವನ್ನು ಇದೀಗ ಆನ್‌ಲೈನ್‌ನಲ್ಲಿ ಕ್ರೇಜಿ ಹುಟ್ಟಿಸಿ ಸಕತ್ ವೈರಲ್ ಆಗುವಂತೆ ಮಾಡಿದೆ ಹಾಗೂ ನೋಡುಗರನ್ನು ಅಚ್ಚರಿಗೋಳಿಸಿತ್ತಿದೆ.
ವಿಂಡೋಸ್ ಸೆಂಟ್ರಲ್ ಗೇಮಿಂಗ್, ಪಿಸಿ/ಎಕ್ಸ್ ಬಾಕ್ಸ್ ಗೇಮಿಂಗ್ ಸುದ್ದಿಗಳಿಗೆ ಮೀಸಲಾಗಿರುವ ಟ್ವಿಟರ್ ಹ್ಯಾಂಡಲ್, ಈ ಆಟದ ಕುರಿತಾದ ವೀಡಿಯೊವನ್ನು ಪೋಸ್ಟ್ ಮಾಡಿದೆ. ಶೀರ್ಷಿಕೆಯಲ್ಲಿ “Minecraft ನಲ್ಲಿ ಆಕಸ್ಮಿಕವಾಗಿ ಬ್ರಹ್ಮಾಂಡವನ್ನು ರಚಿಸಲಾಗಿದೆ” ಎಂದು ವೀಡಿಯೊದೊಂದಿಗೆ ಪೋಸ್ಟ್ ಮಾಡಲಾದೆ.
ಪೋಸ್ಟ್ ಮಾಡಿದ ನಂತರ, ವೀಡಿಯೊವನ್ನು 12 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು ಲೈಕ್ ಗಳ ಸಂಖ್ಯೆಗಳು ವೇಗವಾಗಿ ಹೆಚ್ಚುತ್ತಿವೆ.
“ಕೆಲವರ ಕ್ರಿಯಾಶೀಲತೆ ಬಗ್ಗೆ ನಾನು ಯಾವಾಗಲೂ ವಿಸ್ಮಯ ಹೊಂದಿ ಅಚ್ಚರಿಗೆ ಒಳಗಾಗುತ್ತೆನೆ … ಅದು ಹೇಗೆ ಸಾಧ್ಯ ?!,” ಎಂದು ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
“ಇದು ಅದ್ಭುತವಾಗಿದೆ. ನಾನು ಅಕ್ಷರಶಃ ಮೂಕನಾಗಿದ್ದೇನೆ, ”ಎಂದು ಮತ್ತೊಬ್ಬರು ವ್ಯಕ್ತಪಡಿಸಿದರು. “ಭವ್ಯವಾಗಿದೆ,” ಎಂದು ಮೂರನೇಯವರು ಪೋಸ್ಟ್ ಮಾಡಿದ್ದರೆ. “ಇದು ಗೇಮರ್ ಮಾಡಿದ ಅತ್ಯುತ್ತಮ ಕೆಲಸ” ಎಂದು ನಾಲ್ಕನೆಯವರು ಬರೆದಿದ್ದಾರೆ.
ChrisDaCow ಈ ವಿಡಿಯೋವನ್ನು YouTube ಚಾನಲ್‌ನಲ್ಲಿ ವೀಡಿಯೊದ ಪೋರ್ತಿ ಆವೃತ್ತಿಯನ್ನು ಪೋಸ್ಟ್ ಮಾಡಿದೆ.
ವೀಡಿಯೊಗೆ ಟನ್‌ಗಳಷ್ಟು ಮೆಚ್ಚುಗೆಯನ್ನು ಪಡೆದು ಹೆಚ್ಚು ಹೆಚ್ಚು ಕಾಮೆಂಟ್‌ಗಳನ್ನು ಪಡೆದಿದೆ. “ಇದು ವಿಶಿಷ್ಟವಾಗಿದೆ. ನನ್ನ ಇಡೀ ಜೀವನದಲ್ಲಿ Minecraft ನಲ್ಲಿ ಇಷ್ಟು ಸುಂದರವಾದದ್ದನ್ನು ನಾನು ನೋಡಿಲ್ಲ ಇದು ಒಳ್ಳೆಯ ಕೆಲಸ.” ಎಂದು ಯೂಟ್ಯೂಬ್ ಬಳಕೆದಾರರೊಬ್ಬರು ಹೊಗಳಿದ್ದಾರೆ.
universe inside the game-Man recreates the universe in Minecraft…!
https://twitter.com/WCGamingTweets/status/1577970541419532289?ref_src=twsrc%5Etfw%7Ctwcamp%5Etweetembed%7Ctwterm%5E1577970541419532289%7Ctwgr%5E43e0b8936c69926c25f962f91121191bcf85af00%7Ctwcon%5Es1_&ref_url=https%3A%2F%2Fwww.hindustantimes.com%2Ftrending








