ಉಡುಪಿ – ಜಿಲ್ಲೆಯಲ್ಲಿ ಪರವಾನಗಿ ರಹಿತ, ಅನಧಿಕೃತ ವಾಹನ ಜಪ್ತಿ – ಆರ್.ಟಿ.ಒ ಅಧಿಕಾರಿ ‌ಜೆಪಿ ಗಂಗಾಧರ್

1 min read
Unlicensed, unauthorized vehicles

ಉಡುಪಿ – ಜಿಲ್ಲೆಯಲ್ಲಿ ಪರವಾನಗಿ ರಹಿತ, ಅನಧಿಕೃತ ವಾಹನ ಜಪ್ತಿ – ಆರ್.ಟಿ.ಒ ಅಧಿಕಾರಿ ‌ಜೆಪಿ ಗಂಗಾಧರ್

ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆಪಿ ಗಂಗಾಧರ್ ಬುಧವಾರ, ಉಡುಪಿ ಜಿಲ್ಲೆಯಾದ್ಯಂತ ಪರವಾನಗಿ ಇಲ್ಲದೆ ಸಂಚರಿಸುತ್ತಿರುವ ಅಥವಾ ಅನಧಿಕೃತವಾದ ವಾಹನಗಳು ಕಂಡುಬಂದರೆ ವಶಪಡಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಖಾಸಗಿ ಬಸ್‌ಗಳು, ಕೆಎಸ್‌ಆರ್‌ಟಿಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಮತ್ತು ಕೋವಿಡ್ -19 ವಿರುದ್ಧ ಲಸಿಕೆ ಹಾಕಿಸದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಾಸ್ಕ್ ಇಲ್ಲದೆ ಕೆಲಸ ಮಾಡುವವರು ಕಾನೂನಿನ ಪ್ರಕಾರ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
Unlicensed, unauthorized vehicles
ನ್ಯಾಯಾಲಯದ ಆದೇಶದ ಪ್ರಕಾರ, ಯಾವುದೇ ವಾಹನಗಳು ನಂಬರ್‌ ಪ್ಲೇಟ್‌ಗಿಂತ ಮೇಲೆ ಹೆಸರುಗಳು, ಚಿಹ್ನೆಗಳು ಅಥವಾ ಲಾಂಛನಗಳನ್ನು ಬಳಸಬಾರದು. ಆದೇಶವನ್ನು ಉಲ್ಲಂಘಿಸಿದ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ವಶಪಡಿಸಿಕೊಂಡ ವಾಹನಗಳಲ್ಲಿ ‌ಸರಿಯಾದ ದಾಖಲಾತಿಗಳನ್ನು ನೀಡಿದ ನಂತರ 233 ಬಸ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
wearing masks
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

#Unlicensed #unauthorized #vehicles

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd