Rishabh Pant | ಎಂಥಾ ಕೆಲ್ಸ ಮಾಡ್ಬಿಟ್ಟೆ ಸೂರ್ಯ..? ಪಾಪ ಪಂತ್..!!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ದುರಾದೃಷ್ಟ ಬೆನ್ನ ಹಿಂದೆ ಬಿದ್ದಿತ್ತು. ಪಂದ್ಯದಲ್ಲಿ ರಿಷಬ್ ಪಂತ್ ಅನಿರೀಕ್ಷಿತವಾಗಿ ರನೌಟ್ ಆಗಿ ಹಿಂತಿರುಗಿದರು.
ಭಾನುವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 176 ರನ್ ಗಳಿಗೆ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಕ್ಕಿತ್ತು.
ರೋಹಿತ್ ಶರ್ಮಾ ಅಬ್ಬರದ ಆಟವಾದ್ರೆ, ಇಶಾನ್ ಕಿಶಾನ್ ನಾಯಕನಿಗೆ ಸಾಥ್ ನೀಡುತ್ತಾ ಸಾಗಿದ್ರು.
ಆದ್ರೆ ರೋಹಿತ್ ಶರ್ಮಾ 60 ರನ್ ಗಳಿಸಿ ಔಟ್ ಆಗುತ್ತಿದ್ದಂತೆ, ವಿರಾಟ್ ಕೊಹ್ಲಿ ಬಂದ ದಾರಿಯಲ್ಲೇ ಹೆಜ್ಜೆ ಹಾಕಿದ್ರು.

ಕಿಶಾನ್ ಕೂಡ ವಿರಾಟ್ ಹಿಂದೆ ಹೋದ್ರು. ಈ ಸಂದರ್ಭದಲ್ಲಿ ಕ್ರೀಸ್ ಗೆ ಬಂದ ರಿಷಬ್ ಪಂತ್, ಸೂರ್ಯ ಕುಮಾರ್ ಯಾದವ್ ತಂಡವನ್ನ ಗೆಲುವಿನತ್ತ ಕೊಂಡೊಯ್ಯವ ಪ್ರಯತ್ನಿಸಿದರು.
ಆದ್ರೆ ಅಲ್ಜಾರಿ ಜೋಸೆಫ್ ಎಸೆದ ಇನಿಂಗ್ಸ್‌ನ 18ನೇ ಓವರ್‌ನ ಮೂರನೇ ಎಸೆತದಲ್ಲಿ ಸೂರ್ಯಕುಮಾರ್ ಸ್ಟ್ರೈಟ್ ಡ್ರೈವ್‌ಗೆ ಯತ್ನಿಸಿದರು.
ಬಾಲ್ ಜೋಸೆಫ್ ಕಾಲು ತಾಕಿ ವಿಕೆಟ್ ಗೆ ಬಿತ್ತು. ಇತ್ತ ಈಗಾಗಲೇ ನಾನ್ ಸ್ಟ್ರೈಕ್ ಎಂಡ್ ನಲ್ಲಿದ್ದ ಪಂತ್ ಕ್ರೀಸ್ ಬಿಟ್ಟಿದ್ದರು. ಹೀಗಾಗಿ ಪಂತ್ ರನೌಟ್ ಆಗಿ ಡಕೌಟ್ ಸೇರಿಕೊಂಡರು.
ಇತ್ತ ಸೂರ್ಯಕುಮಾರ್ ಯಾದವ್ ಕೂಡ ಇದಕ್ಕೆ ನಿರಾಸೆಗೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.