Unsafe States for Women – ಟಾಪ್ 10 ಅತ್ಯಂತ ಅಪಾಯಕಾರಿ ರಾಜ್ಯಗಳಿವು..!
ಭಾರತ ಅನೇಕ ವಿಚಾರಗಳಿಂದ ಇಡೀ ವಿಶ್ವದಲ್ಲಿ ಪ್ರಸಿದ್ಧಿ ಪಡೆದಿದೆ. ವೈವಿದ್ಯತೆಯಲ್ಲಿ ಏಕತೆ, ಸಂಸ್ಕೃತಿ, ನೆಲ ಜಲ , ಭಾಷೆ ಹೀಗೆ ಹಲವಾರು ವಿಚಾರಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಆದ್ರೆ ಇದೇ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪರಾಧಗಳ ಪ್ರಮಾಣ ಜನರನ್ನ ಆತಂಕಕ್ಕೆ ದೂಡುತ್ತಿದೆ. ಅತ್ಯಾಚಾರ, ಕೊಲೆ , ಲೂಟಿಯಂತಹ ಅಪರಾಧ ಪ್ರಕರಣಗಳು ನಡೆಯುತ್ತಿದ್ದು, ಮುಖ್ಯವಾಗಿ ಮಹಿಳೆಯರಿಗೆ ಸೇಫ್ಟಿ ಇಲ್ವಾ ಅನ್ನೋ ನಿಲುವಿಗೆ ಬಂದು ನಿಲ್ಲುವಂತಾಗಿದೆ.
ಹೀಗೆ ಭಾರತದಲ್ಲಿ 2020ರ HDI INDEX ನ ಹೋಲಿಕೆ ಹಾಗೂ crime rate Per Capita ಮೂಲಗಳ ಪ್ರಕಾರ 10 ಅತ್ಯಂತ ಅಪಾಯಕಾರಿ ರಾಜ್ಯಗಳ ಬಗ್ಗೆ ತಿಳಿಯೋಣ. ಅಂದ್ಹಾಗೆ ಪ್ರತಿ ರಾಜ್ಯ ನಗರಗಳಲ್ಲೂ ಕ್ರೈಮ್ ಗಳಿವೆ. ಆದ್ರೆ ಅತಿ ಹೆಚ್ಚು ಎಲ್ಲಿ. ಯಾವ ರಾಜ್ಯದ ಕ್ರೈಮ್ ರೇಟ್ ತುಂಬಾನೆ ಹೆಚ್ಚಿದೆ. ಈ ರಾಜ್ಯಗಳು ಮಹಿಳೆಯರಿಗೆ ಬಹುಮುಖ್ಯವಾಗಿ ಸೇಫ್ ಅಲ್ಲಾ, ಪ್ರವಾಸಿಗರು ಬಹಳ ಅಲರ್ಟ್ ಆಗಿರಬೇಕಾದಂತಹ ಆ ರಾಜ್ಯಗಳ ಬಗ್ಗೆ ತಿಳಿಯೋಣ.
ಉತ್ತರಪ್ರದೇಶ – CRIME Rate Per Capita -7.4
ಕ್ರೈಮ್ , ಅಪರಾಧಗಳು, ಅದ್ರಲ್ಲೂ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಯಾವ ರಾಜ್ಯದಲ್ಲಿ ಹೆಚ್ಚು ಅಂದ್ರೆ, ಯಾವ ರಾಜ್ಯ ಮಹಿಳೆಯರಿಗೆ ಸೇಫ್ಟಿ ಅಲ್ಲ ಅಂತ ಯೋಚನೆ ಮಾಡಿದ್ರೆ ಹಿಂದೂ ಮುಂದು ನೋಡ್ದೆ ಒಂದು ಕ್ಷಣನೂ ಯೋಚಿಸದೇ ನಮ್ಮ ಬಾಯಲ್ಲಿ ಬರುವ ಮೊದಲನೇ ರಾಜ್ಯದ ಹೆಸರೇ ಉತ್ತರಪ್ರದೇಶ. ಒಂದು ರೀತಿ ಉತ್ತರಪ್ರದೇಶ ಅಪರಾಧಗಳ ಆಗರವಾಗಿದೆ. ದಿನೇ ದಿನೇ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ರಾಜ್ಯ ನಿಜಕ್ಕೂ ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು ಸಾಬೀತಾಗುತ್ತಿದೆ. ಆದ್ರೆ ಅಲ್ಲಿನ ಸರ್ಕಾರ ಯಾಕೆ ಈ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ ಅನ್ನುವುದು ಕೂಡ ದೊಡ್ಡ ಸವಾಲ್ ಆಗಿದೆ. ಉನ್ನಾವೋ ರೇಪ್ ಕೇಸ್ ಆಗಿರಬಹುದು ಹತ್ರಾಸ್ ಗ್ಯಾಂಗ್ ರೇಪ್ ಆಗಿರಬಹುದು. ಇಲ್ಲಿ ಅತ್ಯಾಚಾರ ಸಂತ್ರಸ್ತೆಯರಿಗೆ ದಕ್ಕಬೇಕಾದ ನ್ಯಾಯವೂ ಸಿಕ್ಕಿಲ್ಲ. ಈ ಪ್ರಕರಣಗಳು ಅಲ್ಲಿನ ಅರಾಜಕತೆಗೆ ಸಾಕ್ಷಿ. ಕ್ರೈಮ್ ರೇಟ್ : ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ರಿಪೋರ್ಟ್ ಅನ್ವಯ CRIME Rate Per Capita -7.4 ಹೀಗಾಗಿ ಭಾರತದ ಅತಿ ಹೆಚ್ಚ ಅಪಾಯಕಾರಿ ರಾಜ್ಯವೂ ಉತ್ತರಪ್ರದೇಶವೇ ಆಗಿದೆ.
ಅರುಣಾಚಲಪ್ರದೇಶ -CRIME Rate Per Capita – 5.8
ಅರುಣಾಚಲ ಪ್ರದೇಶವೂ ಸಹ ಒನ್ ಆಫ್ ದ ಡೇಂಜರಸ್ ರಾಜ್ಯ. ಉತ್ತರಪ್ರದೇಶದ ನಂತರ ಅಪರಾಧಗಳ ಪ್ರಮಾಣಗಳು ಹೆಚ್ಚಾಗಿದ್ದು, ಮಹಿಳೆಯರಿಗೆ ಒಂಟಿಯಾಗಿ ಓಡಾಡುವುದಕ್ಕು ಸುರಕ್ಷಿತವಲ್ಲದ 2ನೇ ರಾಜ್ಯ ಅರುಣಾಚಲಪ್ರದೇಶ. ಇಲ್ಲಿ ಅಪರಾಧ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಅನೇಕ ಏರಿಯಾಗಳಲ್ಲಿ ಕತ್ತಲಾದ ನಂತರ ಓಡಾಡುವುದಕ್ಕೂ ನಿರ್ಬಂಧ ಹೇರಲಾಗಿದೆ.
ಜಾರ್ಖಂಡ್ -CRIME Rate Per Capita – 5.3
ಇನ್ನೂ ಉತ್ತರಪ್ರದೇಶ ಬಿಟ್ಟರೆ ಅತಿ ಹೆಚ್ಚು ಅತ್ಯಾಚಾರದಂತಹ ಹೇಯ ಪ್ರಕರಣಗಳು ದಾಖಲಾಗುತ್ತಿರುವುದು ಜಾರ್ಖಂಡ್ ರಾಜ್ಯದಲ್ಲಿ. ನಿಜ ಇಲ್ಲಿನ ಕಾನೂನು ವ್ಯವಸ್ಥೆಯ ಬಗ್ಗೆ ಬೇಸರವೂ ಆಗುತ್ತೆ. ಯಾಕಂದ್ರೆ ಈ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ರೆ ಅದೆಷ್ಟೋ ಕೇಸ್ ಗಳು ಪೊಲೀಸ್ ಠಾನೆಯಲ್ಲಿ ದಾಖಲಾಗಿಲ್ಲದೇ ಹಾಗೆಯೇ ಮುಚ್ಚಿ ಹೋಗಿವೆ ಎನ್ನಲಾಗುತ್ತೆ.
ಮೇಘಾಲಯ – CRIME Rate Per Capita – 5.1
ದೇಶದಲ್ಲಿ ಅಸುರಕ್ಷತಾ / ಅಪಾಯಕಾರಿ ರಾಜ್ಯಗಳ ಲಿಸ್ಟ್ ನಲ್ಲಿ ಮೇಘಾಲಯ 4ನೇ ಸ್ಥಾನದಲ್ಲಿ ನಿಲ್ಲುತ್ತೆ. ಈ ರಾಜ್ಯವೂ ಕೂಡ ಜನರಿಗೆ ಅಷ್ಟು ಸುರಕ್ಷಿತವಲ್ಲ ಅದ್ರಲ್ಲೂ ಪ್ರವಾಸಿಗರು ತುಂಬಾನೆ ಅಲರ್ಟ್ ಆಗಿರಬೇಕು. ಇನ್ನೂ ಈ ರಾಜ್ಯದಲ್ಲಿ ಹಲವು ಏರಿಯಾಗಳಲ್ಲಿ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ ಎಂದು ಕೆಲ ಮೂಲಗಳು ತಿಳಿಸಿವೆ.
ದೆಹಲಿ – CRIME Rate Per Capita – 5
ರಾಷ್ಟ್ರರಾಜದಾನಿ ದೆಹಲಿ.. ಇಲ್ಲಿನ ಅಪರಾಧಗಳು ಅಂತ ನೋಡುವುದಾದ್ರೆ ಇಂದಿಗೂ 2012ರಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶದ ಜನರನ್ನ ಬೆಚ್ಚಿ ಬೀಳಿಸುತ್ತೆ. ಅಷ್ಟು ಕ್ರೂರತ್ವದಿಂದ ನಿರ್ಭಯಾ ಹತ್ಯೆಮಾಡಲಾಗಿತ್ತು. ಅಪರಾಧಿಗಳನ್ನ ಗಲ್ಲಿಗೇರಿಸಿ ನಿರ್ಭಯಾಗೆ ನ್ಯಾಯ ಒದಗಿಸಲಾಯ್ತು. ಆದ್ರೆ ಈಗಲೂ ದೆಹಲಿಯಲ್ಲಿ ಅತ್ಯಾಚಾರ, ಕೊಲೆ, ದರೋಡೆಯಂತಹ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಇಂದಿಗೂ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ರೆ ಕಳೆದ 2-3 ವರ್ಷಗಳಿಗೆ ಹೋಲಿಕೆ ಮಾಡಿದ್ರೆ ದೆಹಲಿಯಲ್ಲಿ ಕ್ರೈಂ ರೇಟ್ ತುಂಬಾನೆ ಕಡಿಮೆಯಾಗಿದೆ ಎನ್ನಬಹುದು. ಯಾಕಂದ್ರೆ 2-3 ವರ್ಷಗಳ ಹಿಂದಿನ ಸ್ಟಾಟಿಸಸ್ಟಿಕ್ಸ್ ನಲ್ಲಿ ಟಾಪ್ ಕ್ರೈಮ್ ಸಿಟಿಗಳ ಲಿಸ್ಟ್ ನಲ್ಲಿ ದೆಹಲಿಯೇ ಮೊದಲನೇಯದಾಗಿತ್ತು. ಆದ್ರೆ ಈಗ ಅಲ್ಲಿನ ಸರ್ಕಾರ ಜನರ ಸುರಕ್ಷತೆಗೆ ಅನೇಕ ಕ್ರಮಗಳನ್ನ ಕೈಗೊಳ್ಳುತ್ತಿದೆ.