Uorfi Javed : ಉರ್ಫಿ ಬಂಧನಕ್ಕೆ ಆಗ್ರಹಿಸಿ ದೂರು ನೀಡಿದ ಬಿಜೆಪಿ ಕಾರ್ಯಕರ್ತೆ…
ಸೋಷಿಯಲ್ ಮೀಡಿಯಾಸ ಸೆನ್ಸೆಷನ್ ಉರ್ಫಿ ಜಾವೇದ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯ ಹೆಡಲೈನ್ ಆಗುತ್ತಲೇ ಇರುತ್ತಾರೆ. ಉರ್ಫಿಯ ಫ್ಯಾಶನ್ ಸೆನ್ಸ್ ಇದೀಗ ಇದೀಗ ಒಂದು ಹಂತವನ್ನ ದಾಟಿ ಮುಂದಕ್ಕೆ ಹೋಗಿದೆ.
ಗ್ಲಾಸ್ ನಿಂದ ಮಾಡಿದ ಅಥವಾ ಬ್ಲೇಡ್ ನಿಂದ ಮಾಡಿದ ಡ್ರೆಸ್ ಗಳನ್ನ ಧರಿಸಿ ಅಚ್ಚರಿ ಮೂಡಿಸುತ್ತಿದ್ದ ನಟಿ ಹಲವು ಭಾರಿ ಸಾರ್ವಜನಿಕ ಸ್ಥಳಗಳಲ್ಲಿ ಟಾಪ್ ಲೆಸ್ ಆವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಉರ್ಫಿಯ ಈ ಫ್ಯಾಶನ್ ಸೆನ್ಸ್ ನ್ನಹಲವರು ಹೊಗಳಿದರೆ ಹಲವರು ಕಣ್ಣು ಕೆಂಪಗಾಗಿಸಿದೆ.
ಉರ್ಫಿ ತನ್ನ ಧರಿಸಿನಿಂದಾಗಿ ಆಗಾಗ್ಗೆ ಟ್ರೋಲ್ ಆಗುವುದು ಕಾಮನ್ ಆದ್ದರೀಗ ಆಕೆಯ ವಿರುದ್ಧ ಪೊಲೀಸ್ ದೂರುಗಳು ದಾಖಲಾಗುತ್ತಿವೆ. ಮಹಾರಾಷ್ಟ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ಅವರು ಉರ್ಫಿ ಜಾವೇದ್ ಅವರ ಬಟ್ಟೆಗಳನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಅಷ್ಟೆ ಅಲ್ಲದೇ ಮುಂಬೈ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಉರ್ಫಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ದೂರಿನ ಪತ್ರದ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಅವರು, ಮುಂಬೈನ ಬೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತನ್ನ ದೇಹವನ್ನ ಪ್ರದರ್ಶಿಸುವ ಉರ್ಫಿ ಜಾವೇದ್ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬರೆದಿದ್ದಾರೆ.
Uorfi Javed: BJP worker who complained demanding the arrest of Urfi…