Uorfi Javed : ನನ್ನ ಖಾಸಗಿ ಅಂಗ ಕಾಣಿಸದ ಹೊರತಾಗಿ ನನ್ನ ಬಂಧನ ಅಸಾಧ್ಯ – ಉರ್ಫಿ
ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಅಂದ್ರೆ ಅದು ಉರ್ಫಿ ಜಾವೇದ್..
ತಮ್ಮ ವಿಚಿತ್ರ ಹಾಗೂ ಕೆಲವೊಮ್ಮೆ ತೀರಾ ಮೈಕಾಣಿಸುವಂತಹ ಬಟ್ಟೆ ಧರಿಸುವ ುರ್ಫಿ ಟ್ರೋಲ್ ಆಗ್ತಲೇ ಇರುತ್ತಾರೆ.. ಅನೇಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ..
ಇತ್ತೀಚೆಗೆ ಬಿಜೆಪಿ ನಾಯಕಿಯೊಬ್ಬರು ಊರ್ಫಿ ಜಾವೇದ್ ವಿರುದ್ಧ ದೂರ ದಾಖಲಿಸಿ , ಬಂಧನಕ್ಕೆ ಆಗ್ರಹಿಸಿದ್ದಾರೆ..
ಇದಕ್ಕೆ ಡೇರಿಂಗ್ ಉತ್ತರ ನೀಡಿರೋ ಉರ್ಫಿ , ನನ್ನ ಖಾಸಗಿ ಅಂಗ ಕಾಣಿಸದ ಹೊರತು ನನ್ನನ್ನ ಜೈಲಿಗೆ ಕಳುಹಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ..
ಊರ್ಫಿ ವಿರುದ್ಧ ಬಿಜೆಪಿ ಸದಸ್ಯೆ ಚಿತ್ರಾ ವಾಘ್ ಎಂಬುವವದರು ಹೊಸ ವರ್ಷದಂದೇ ಕೇಸ್ ದಾಖಲಿಸಿದ್ದಾರೆ.
ತನ್ನ ವಿರುದ್ಧ ದೂರು ದಾಖಲಿಸುತ್ತಿದ್ದಂತೆ ಊರ್ಫಿ ಜಾವೇದ್ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಊರ್ಫಿ ಮಾರುದ್ಧ ಬರೆದುಕೊಂಡಿದ್ದಾರೆ. ತನ್ನ ಜೈಲಿಗೆ ಕಳಿಸುವಂತಹ ಕಾಯ್ದೆ ಸಂವಿದಾನದಲ್ಲಿ ಇಲ್ಲವೆಂದು ವಿವಾದಾತ್ಮಕ ನಟಿ ಹೇಳಿಕೆ ನೀಡಿದ್ದಾರೆ.
ಬಿಲ್ಕಿಸ್ ಬಾನು ಪ್ರಕರಣದ ಅತ್ಯಾಚಾರಿಗಳು ಆರಾಮಾಗಿ ಓಡಾಡುತ್ತಿದ್ದು, ಅವರನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ.. ಅಲ್ಲದೇ ಹೊಸ ವರ್ಷವನ್ನು ಮತ್ತೊಬ್ಬ ರಾಜಕೀಯ ವ್ಯಕ್ತಿಯಿಂದ ಮತ್ತೊಂದು ಪೊಲೀಸ್ ಕೇಸ್‌ನಿಂದ ಆರಂಭ ಆಗಿದೆ. ರಾಜಕೀಯ ವ್ಯಕ್ತಿಗಳಿಗೆ ಬೇರೆ ಕೆಲಸ ಇಲ್ಲವೇ? ರಾಜಕೀಯ ವ್ಯಕ್ತಿಗಳು ಹಾಗೂ ವಕೀಲರು ಮೂಖರಾಗಿದ್ದಾರೆಯೇ? ನನ್ನ ಜೈಲಿಗೆ ಕಳುಹಿಸಲು ಸಂವಿಧಾನದಲ್ಲಿ ಯಾವುದೇ ಕಾಯ್ದೆ ಇಲ್ಲ. ಬೆತ್ತಲೆ ಮತ್ತು ಅಶ್ಲೀಲತೆ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತೆ ಎಂದಿದ್ದಾರೆ..
ನನ್ನ ಎರಡು ಖಾಸಗಿ ಅಂಗಾಂಗ ಕಾಣಿಸದ ಹೊರತಾಗಿ ಯಾರೂ ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಇವೆರೆಲ್ಲರೂ ಮೀಡಿಯಾದ ಗಮನ ಸೆಳೆಯುವುದಕ್ಕೆ ಹೀಗೆ ಮಾಡಿದ್ದಾರೆ. ಮುಂಬೈನಲ್ಲಿ ಮಾನಕಳ್ಳ ಕಳ್ಳಸಾಗಾಣಿಕ ಹಾಗೂ ಲೈಂಗಿಕ ಕಳ್ಳಸಾಗಾಣಿಕೆ ಹೆಚ್ಚಿದ್ದು, ನಾನು ಅದನ್ನು ವಿರೋಧಿಸಿದ್ದೇನೆ. ಅಕ್ರಮ ಡ್ಯಾನ್ಸ್ ಬಾರ್ ಗಳು ಹಾಗೂ ವೇಶ್ಯಾವಾಟಿಕೆಯನ್ನು ಮುಚ್ಚುವ ಬಗ್ಗೆ ಏನಂತೀರಾಎಂದು ಊರ್ಫಿ ಜಾವೇದ್ ಕಿಡಿಕಾರಿದ್ದಾರೆ.
ಬಿಲ್ಕಿಸ್ ಬಾನು ಅತ್ಯಾಚಾರಿಗಳು ಆರಾಮಾಗಿ ಓಡಾಡುತ್ತಿದ್ದು, ರಾಜಕಾರಣಗಳು ನನ್ನನ್ನು ಬಂಧಿಸುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ನಾನು ಸಮಾಜಕ್ಕೆ ಅತ್ಯಾಚಾರಿಗಳಿಗಿಂತ ಮಾರಕವೇ? ಚಿತ್ರಾ ವಾಘ್ ಅವರನ್ನು ಬಿಟ್ಟು ಎಲ್ಲರಿಗೂ ಹ್ಯಾಪಿ ನ್ಯೂ ಇಯರ್ ಎಂದು ಕಿಡಿಕಾರಿದ್ದಾರೆ..