ಕನ್ನಡ ದ್ವಜವನ್ನು ಸುಟ್ಟಿರುವ ಹೇಡಿಗಳನ್ನು ಕೂಡಲೇ ಭಂದಿಸಿ : ಉಪೇಂದ್ರ
ಇತ್ತೀಚೆಗೆ MES ಪುಂಡರು ಪ್ರತಿಭಟನಾ ರ್ಯಾಲಿಯಲ್ಲಿ ಉದ್ಧಟತನ ಮೆರೆದಿದ್ದರು.. ನಮ್ಮ ಕನ್ನಡದ ಬಾವುಟಕ್ಕೆ ಬೆಂಕಿ ಹಚ್ಚಿದ್ದೂ ಅಲ್ಲದೇ , ಕನ್ನಡ ಪರ ಹೋರಾಟಗಾರರ ವಿರುದ್ಧವೇ ಕೊಲೆ ಯತ್ನದ ದೂರು ದಾಖಲಿಸಿ ಕಿಡಿಗೇಡಿತನ ಪ್ರದರ್ಶಿಸಿದ್ದರು..
ಕನ್ನಡದ ಪರ ಹೋರಾಟಗಾರರು ಎಂಇಎಸ್ ಮುಖಂಡ ದೀಪಕ್ ದಳವಿಗೆ ಡಿಸೆಂಬರ್ 13 ರಂದು ಘೇರಾವ್ ಹಾಕಿ ಮುಖಕ್ಕೆ ಮಸಿ ಬಳಿದರು. ಇದನ್ನು ಖಂಡಿಸಿ ಎಂಇಎಸ್‌ನವರು ಪ್ರತಿಭಟನಾ ರ್‍ಯಾಲಿ ಮಾಡಿ ತಿಲಕ್‌ವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸಿದರು. ಪೊಲೀಸರು ದೂರು ದಾಖಲಿಸಿ, ಕನ್ನಡಪರ ಹೋರಾಟಗಾರ ಸಂಪತ್‌ಕುಮಾರ್ ಹಾಗೂ ಇನ್ನಿಬ್ಬರನ್ನು ಬಂಧಿಸಿದ್ದಾರೆ.
ಪ್ರತಿಭಟನೆ ವೇಳೆ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಲಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕನ್ನಡ ಬಾವುಟ ಸುಟ್ಟಿರುವುದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಕನ್ನಡಿಗರು ನಿಗಿ ನಿಗಿ ಕೆಂಡಕಾರುತ್ತಿದ್ದಾರೆ.. ಈ ಪುಂಡರ ಪುಂಡಾಟ ಹಾಗೂ ಕನ್ನಡ ಪರ ಹೋರಾಟಗಾರರನ್ನ ಬಂಧಿಸಿದ ವಿರುದ್ಧ ಕನ್ನಡಿಗರು ಹಾಗೂ ಕನ್ನಡ ಸಿನಿಮಾರಂಗದ ತಾರೆಯರು ಸಿಡಿದೆದ್ದಿದ್ದಾರೆ..
ಕನ್ನಡ ಸಿನಿಮಾ ತಾರೆಯರು ಈಗ ಪ್ರಕರಣದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.. ನವರಸ ನಾಯಕ ಜಗ್ಗೇಶ್ , ಶಿವರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ತಾರೆಯರು ಕಿಡಿಕಾರುತ್ತಿದ್ದಾರೆ.. ಸೋಷಿಯಲ್ ಮೀಡಿಯಾ ಮೂಲಕ ಕನ್ನಡ ಸಿನಿಮಾರಂಗ ತಾರೆಯರು ಆಕ್ರೋಶ ಹೊರಹಾಕ್ತಿದ್ದಾರೆ..
ಅಲ್ಲದೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಎಂಇಎಸ್ ಚೇಲಾಗಳು , ‘ಈಗ ಕನ್ನಡ ಧ್ವಜಕ್ಕೆ ಬೆಂಕಿ ಇಡಲಾಗಿದೆ, ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ’ಎಂದು ಹೇಡಿತತನದ ಮಾತುಗಳನ್ನಾಡಿದ್ದರು. ಇದೇ ವಿಚಾರ ಈಗ ಕನ್ನಡಿಗರ ಮನಸಲ್ಲಿ ಬೆಂಕಿ ಹೊತ್ತಿಸಿದೆ..
ನಟ ಹಾಗೂ ರಾಜಕಾರಣಿ ಉಪೇಂದ್ರ ಅವರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, “ ಕನ್ನಡ ದ್ವಜವನ್ನು ಕೆಲವು ಕಿಡಿಗೇಡಿಗಳು ಸುಟ್ಟಿದ್ದಾರೆ. ಈ ಕೃತ್ಯದ ಹಿಂದಿರುವ ಹೇಡಿಗಳನ್ನು ಕೂಡಲೇ ಭಂದಿಸಿ ಶಿಕ್ಷೆ ನೀಡಬೇಕು. ಇದಕ್ಕಾಗಿ ಹೋರಾಟ ಮಾಡಿದ ನಮ್ಮ ವೀರ ಕನ್ನಡಿಗರನ್ನು ಬಿಡುಗಡೆ ಮಾಡಬೇಕು. ನಮ್ಮ ನಾಡು ನುಡಿ ಸಂಸ್ಕ್ರತಿಯನ್ನು ಅಗೌರವಿಸುವ ಯಾರೇ ಆದರೂ ಅವರ ವಿರುದ್ದ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಲೇಬೇಕು. ಜೈ ಕನ್ನಡಾಂಬೆ” ಎಂದು ಬರೆದುಕೊಂಡಿದ್ದಾರೆ..
ಕನ್ನಡ ದ್ವಜವನ್ನು ಕೆಲವು ಕಿಡಿಗೇಡಿಗಳು ಸುಟ್ಟಿದ್ದಾರೆ. ಈ ಕೃತ್ಯದ ಹಿಂದಿರುವ ಹೇಡಿಗಳನ್ನು ಕೂಡಲೇ ಭಂದಿಸಿ ಶಿಕ್ಷೆ ನೀಡಬೇಕು. ಇದಕ್ಕಾಗಿ ಹೋರಾಟ ಮಾಡಿದ ನಮ್ಮ ವೀರ ಕನ್ನಡಿಗರನ್ನು ಬಿಡುಗಡೆ ಮಾಡಬೇಕು. ನಮ್ಮ ನಾಡು ನುಡಿ ಸಂಸ್ಕ್ರತಿಯನ್ನು ಅಗೌರವಿಸುವ ಯಾರೇ ಆದರೂ ಅವರ ವಿರುದ್ದ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಲೇಬೇಕು. ಜೈ ಕನ್ನಡಾಂಬೆ 🙏🙏 pic.twitter.com/6Wnw8U9NcL
— Upendra (@nimmaupendra) December 16, 2021