Upendra : ಮಾರ್ಚ್ 11 , 12 : 46 ,,,,,, ಈ ಟೈಮ್ ಸಸೇವ್ ಮಾಡಿಟ್ಟುಕೊಳ್ಳಿ…!!! ಆದ್ರೆ ಕಾರಣ..??
ಜನರ ತಲೆಗೆ ಹುಳ ಬಿಟ್ಟು ಡಿಫರೆಂಟ್ ಅನ್ನೋ ಟೈಟಲ್ ಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಕನ್ನಡ ನಟ , ನಿರ್ದೇಶಕ , ರಾಜಕಾರಣಿ ಅಂದ್ರೆ ಅವರು ಉಪೇಂದ್ರ..
ಯಾವುದನ್ನೂ ನೇರವಾಗಿ ಹೇಳದ ಬುದ್ದಿವಂತ.. ಯಾವಾಗಲೂ ಜನರನ್ನ ಕನ್ಫ್ಯೂಸ್ ಮಾಡಿಸುವ ಅವರ ಇದೇ ಕ್ರೇಜ್ ಮುಂದುವರೆದಿದೆ. ಇದೀಗ ಮತ್ತೊಮ್ಮೆ ಅಭಿಮಾನಿಗಳ ತಲೆಗೆ ಉಪ್ಪಿ ಹುಳ ಬಿಟ್ಟಿದ್ಧಾರೆ.
ಅಂದ್ಹಾಗೆ ಈ ಬಾರಿ ಉಪ್ಪಿ ಮಾಡಿದ್ದೇನು..???
‘11.03, 12:46 ಸೇವ್ ದಿಸ್ ಡೇಟ್’……. ಹೀಗೊಂದು ಮಸೇಜ್ ಕಳುಹಿಸಿ ಸೈಲೆಂಟ್ ಆಗಿದ್ದಾರೆ ಉಪ್ಪಿ..
ಇತ್ತ ಉಪ್ಪಿ ಟ್ವೀಟ್ ಹಿಂದಿನ ಮರ್ಮವೇನಿರಬಹುದು.. ಹೀಗ್ಯಾಕೆ ಟ್ವೀಟ್ ಮಾಡಿದ್ರು.. ರಾಜಕೀಯದ ಅಪ್ ಡಡೇಟಾನಾದ್ರೂ ಕೊಡ್ತಾರಾ..?? ಸಿನಿಮಾ ಅಪ್ ಡೇಟ್ ಏನಾದ್ರೂ ಸಿಗಬಹುದು ಅನ್ನೋದೆ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿರುವ ಪ್ರಶ್ನೆ…
ಕಬ್ಜ ಸಿನಿಮಾದಲ್ಲಿ ಬ್ಯುಸಿಯಿರುವ ಉಪ್ಪಿ ಸದ್ಯ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳ್ತಿದ್ಧಾರೆ.. ಉಪ್ಪಿ ಡಯರೆಕ್ಷನ್ ಸಿನಿಮಾ ಒಂದು ಬರುತ್ತಿದೆ ಎಂದ್ರೆ ಆ ಸಿನಿಮಾದ ಬಗ್ಗೆ ಜನರಿಗೆ ಯಾವ ಪರಿ ಕ್ರೇಜ್ ಇರುತ್ತೆ ಅನ್ನೋದನ್ನ ಮತ್ತೆ ಹೇಳಬೇಕಾದ ಅವಶ್ಯಕತೆ ಇಲ್ಲ.. ಈ ಸಿನಿಮಾ ಬಗ್ಗೆ ಯಾವುದಾದರೂ ಅಪ್ ಡೇಟ್ ಕೊಡುತ್ತಾರಾ… ಅಥವ ಕಬ್ಜದ ಹೊಸ ಅಪ್ ಡೇಟ್ ನೀಡುತ್ತಾರಾ..?? ಅಥವ ಹೊಸ ಸಿನಿಮಾದ ಬಗ್ಗೆ ಏನಾದ್ರೂ ಸುಳಿವು ಸಿಗಲಿದ್ಯಾ..???
ಇದ್ಯಾವುದೂ ಅಲ್ಲದೇ ಹೋದರೆ ,, ತಮ್ಮ ಪಕ್ಷವಾದ ಪ್ರಜಾಕೀಯದಲ್ಲಿ ಆಕ್ಟಟೀವ್ ಆಗುವ ಬಗ್ಗೆ , ಮುಂದಿನ ವರ್ಷ ಅಂದ್ರೆ 2023 ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಕುರಿತಾಗಿ ಯಾವುದಾದ್ರೂ ಅಪ್ ಡೇಟ್ ಕೊಡುತ್ತಾರಾ..?? ಅನ್ನೋ ಕ್ಯೂರಿಯಾಸಿಟಿ ಹುಟ್ಟಿಸಿದೆ.










