ಬೆಂಗಳೂರು: ಲಾಕ್‍ಡೌನ್ ಅದೆಷ್ಟೋ ಜನರಿಗೆ ಮಣ್ಣಿನ ವಾಸನೆಯ ಘಮ ಏನೆಂದು ತಿಳಿಸಿದೆ. ಮಹಾನಗರಗಳಲ್ಲಿ ವೇಗದ ಬದುಕಿನಲ್ಲಿ ಬಂಧಿಯಾಗಿ ಹಳ್ಳಿಯ ಮಣ್ಣಿನ ಸೊಗಡನ್ನೇ ಮರೆತವರಿಗೆ ಕೊರೊನಾ ಲಾಕ್‍ಡೌನ್ ಬದುಕಿನ ಹೊಸ ಪಾಠವನ್ನೇ ಕಲಿಸಿದೆ.
ಅದರಲ್ಲೂ ದಿನ ನಿತ್ಯ ಶೂಟಿಂಗ್, ಮೀಟಿಂಗ್, ಪಾರ್ಟಿ ಅಂತೆಲ್ಲಾ ಬ್ಯೂಸಿಯಾಗಿರುತ್ತಿದ್ದ ಅದೆಷ್ಟೋ ಸೆಲೆಬ್ರಿಟಿಗಳು ಮನೆಯಲ್ಲಿ ಬಂಧಿಯಾಗಿ ಹೆಂಡತಿ, ಮಕ್ಕಳು, ಕುಟುಂಬದವರ ಜತೆ ಬೆರೆತು ಜೀವನದ ನಿಜ ಅರ್ಥ ಅರಿತಿದ್ದಾರೆ.
ಲಾಕ್‍ಡೌನ್ ಹಾಗೂ ಲಾಕ್‍ಡೌನ್ ಸಡಿಲಿಕೆ ನಂತರವೂ ರಿಯಲ್‍ಸ್ಟಾರ್ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ದಿನಕ್ಕೊಂದು ವಿಡಿಯೋ ಹಾಗೂ ಫೋಟೋ ಹಾಕುತ್ತಾ ಅಭಿಮಾನಿಗಳ ಖುಷಿ ನೀಡುತ್ತಾ ಬಂದಿದ್ದಾರೆ.
ಇತ್ತೀಚೆಗೆ `ಉಪ್ಪಿ ಮಾಸ್ಕ್’ ಹೆಸರಲ್ಲಿ ಮಾಸ್ಕ್‍ಗಳನ್ನು ತಯಾರಿಸಿದ್ದ ಉಪೇಂದ್ರ, ಮಹಾಮಾರಿ ಕೊರೊನಾ ಸೋಂಕಿನಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಹೇಗೆ, ಪ್ರತಿಯೊಬ್ಬರೂ ಮಾಸ್ಕ್‍ನ್ನು ಕಡ್ಡಾಯವಾಗಿ ಧರಿಸಬೇಕು ಎಂಬ ಸಂದೇಶ ನೀಡಿದ್ದರು.
ಇದೀಗ ಮತ್ತೊಂದು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಉಪೇಂದ್ರ, ತಮ್ಮ ಫಾರ್ಮ್‍ಹೌಸ್‍ನಲ್ಲಿ ತಾವೇ ಕೈಯಾರೆ ಬೆಳೆದ ತರಕಾರಿ, ಸೇವಂತಿಗೆ ಬೆಳೆದಿರುವ ಖುಷಿ ಹಂಚಿಕೊಂಡಿದ್ದಾರೆ.
ಎರಡೂವರೆ ತಿಂಗಳ ಹಿಂದೆ ಅಂದರೆ, ಮಾರ್ಚ್ 25ರಂದು ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿತ್ತು. ಅಗ ಮನೆಯಲ್ಲಿ ಸುಮ್ಮನೇ ಕುಳಿತು ಸಮಯ ವ್ಯರ್ಥ ಮಾಡದ ಉಪೇಂದ್ರ, ತರಕಾರಿ, ಹೂವಿನ ಬೀಜ ಬಿತ್ತನೆ ಮಾಡಿದ್ದರು. ಯಾವುದೇ ಕೀಟನಾಶಕ, ರಸಗೊಬ್ಬರ ಬಳಸದೆ ಸಂಪೂರ್ಣ ನೈಸರ್ಗಿಕವಾಗಿ ಬೆಳೆದ ಬದನೆ, ಸವತೆ ಹಾಗೂ ಸೇವಂತಿ ಹೂ ಕಟಾವಿಗೆ ಬಂದಿವೆ. ಅವುಗಳನ್ನು ಕಟಾವು ಮಾಡಿದ ನಂತರ ವಿಡಿಯೋ ಮಾಡಿರುವ ಉಪೇಂದ್ರ, ನೈಸರ್ಗಿಕ ಕೃಷಿಯ ಮಹತ್ವವನ್ನು ತಿಳಿಸಿದ್ದಾರೆ. ನಮ್ಮ ಕೈಯಾರೆ ಬೆಳೆದ ಬೆಳೆ ಕೈಸೇರಿದಾದ ಸಿಗುವ ಆನಂದವನ್ನು ವಿಡಿಯೋದಲ್ಲಿ ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್
ತುಮಕೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಹೊಸ ಪಿಂಚಣಿ ಪದ್ಧತಿಯನ್ನು (NPS) ರದ್ದುಗೊಳಿಸಿ, ಹಳೇ ಪಿಂಚಣಿ...








