Upendra : ‘ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ’ ಎಂದ ಉಪೇಂದ್ರ..!!!
‘ ಹುಷಾರ್’ ಚಿತ್ರದ ಹಾಡಿಗೆ ಉಪ್ಪಿ ಧ್ವನಿ
‘ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ’ ಸಾಂಗ್
ಉಪ್ಪಿ ಧ್ವನಿಗೆ ಅಭಿಮಾನಿಗಳು ಫಿದಾ
ಹಾಡಿಗೆ ಎ.ಟಿ. ರವೀಶ್ ಸಂಗೀತ
ಚಿತ್ರದ ನಾಯಕನಾಗಿ ಸಿದ್ದೇಶ್ ನಟನೆ
ಬಹುಮುಖ ಪ್ರತಿಭೆ ರಿಯಲ್ ಸ್ಟಾರ್ ಉಪೇಂದ್ರ ಅವರು ಸಕಲ ಕಲಾ ವಲ್ಲಭರು… ನಿರ್ದೇಶನ, ಗಾಯನ , ನಟನೆ ಎಲ್ಲದಕ್ಕೂ ಸೈ.. ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ಉಪ್ಪಿ ಆಗಾಗ ಅನೇಕ ಸಿನಿಮಾಗಳಿಗೆ ಹಾಡುತ್ತಾ , ಹೊಸಬರ ಸಿನಿಮಾಗಳ ಹಾಡಿಗೂ ಧ್ವನಿಯಾಗುತ್ತಾ ಪ್ರೋತ್ಸಾಹಿಸುತ್ತಾರೆ..
ಇದೀಗ “ಹುಷಾರ್” ಸಿನಿಮಾದ “ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ” ಹಾಡಿಗೆ ಧ್ವನಿಯಾಗಿದ್ದಾರೆ.. ಈ ಹಾಡು ಎರೆಡು ದಿನಗಳ ಹಿಂದೆ A2 ಮ್ಯೂಸಿಕ್ ನಲ್ಲಿ ರಿಲೀಸ್ ಆಗಿದ್ದು , ಸಖತ್ ಸೌಂಡ್ ಮಾಡ್ತಿದೆ.. ಉಪ್ಪಿ ಧ್ವನಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ..
ಸತೀಶ್ ರಾಜ್ ಮೂವಿ ಮೇಕರ್ಸ್ ಲಾಂಛನದಲ್ಲಿ, ಸತೀಶ್ ರಾಜ್ ಕಥೆ- ಚಿತ್ರಕಥೆ -ಸಾಹಿತ್ಯ ಸಂಭಾಷಣೆ- ರಚಿಸಿ -ನಿರ್ಮಿಸಿ- ನಿರ್ದೇಶಿಸಿರುವ ಸಿನಿಮಾ ಹುಷಾರ್..
ಉಪೇಂದ್ರ ಹಾಗೂ ಜಾಹ್ನವಿ ಆನಂದ್ ಹಾಡಿರುವ ಈ ಹಾಡಿಗೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ.
ಈ ಸಿನಿಮಾದಲ್ಲಿ ಸಿದ್ದೇಶ್ ನಾಯಕನಾಗಿ ನಟಿಸಿದ್ದಾರೆ. ಆದ್ಯಪ್ರಿಯ, ರಚನ ಮಲ್ನಾಡ್, ವಿನೋದ್, ಡಿಂಗ್ರಿ ನಾಗರಾಜ್, ಗಣೇಶ್ ರಾವ್, ಸತೀಶ್ ರಾಜ್, ಪುಷ್ವ ಸ್ವಾಮಿ, ಲಯ ಕೋಕಿಲ, ಪವಿತ್ರ ಸೇರಿದಂತೆ ದೊಡ್ಡ ತಾರಾಬಳಗವಿದೆ..