ಕೀಪ್ಯಾಡ್ ಫೋನ್ ಬಳಕೆದಾರರಿಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಶೀಘ್ರವೇ ಕೀ ಪ್ಯಾಡ್ ಫೋನ್ ಗಳಲ್ಲಿಯೂ ಯುಪಿಐ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ದೇವಿ ಅಹಲ್ಯಾ ವಿವಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆನ್ ಲೈನ್ ಅಥವಾ ಡಿಜಿಟಲ್ ಪಾವತಿಗಳ ವಿಷಯದಲ್ಲಿ ಭಾರತದಲ್ಲಿ ಕ್ರಾಂತಿಯೇ ಆಗಿದೆ. ಆದರೆ, ದೇಶದಾದ್ಯಂತ ಅನೇಕ ಹಳ್ಳಿಗಳಿವೆ. ಅಲ್ಲಿ ವಿದ್ಯುತ್ ಹಾಗೂ ಇಂಟರ್ ನೆಟ್ ನಲ್ಲಿ ಸಾಕಷ್ಟು ಸಮಸ್ಯೆ ಇದೆ. ಈ ಕಾರಣದಿಂದಾಗಿ ಅಲ್ಲಿ ವಾಸಿಸುವ ಜನರು ಯುಪಿಐನಂತಹ ಡಿಜಿಟಲ್ ಪಾವತಿ ಸೌಲಭ್ಯದ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಯುಪಿಐ ಸೌಲಭ್ಯ ಆಂಡ್ರಾಯ್ಡ್ ಫೋನ್ ಬಳಸುವ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಈಗ ಈ ಸೌಲಬಭ್ಯವನ್ನು ಕೀಪ್ಯಾಡ್ ಹಾಗೂ ಫೀಚರ್ ಫೋನ್ ಗೆ ಸಂಪರ್ಕಿಸುವ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿಯೇ ಆರ್ ಬಿಐ ಸಿದ್ಧತೆಗಳನ್ನು ಆರಂಭಿಸಿದೆ ಎಂದು ಹೇಳಿದ್ದಾರೆ.,