ಹಾಸನ: ಸ್ನೇಹಿತರ ನಡುವೆ ನಡೆಯುತ್ತಿದ್ದ ಎಣ್ಣೆ ಪಾರ್ಟಿಯಲ್ಲಿ ನೀರಿಗಾಗಿ ಗಲಾಟೆ ನಡೆದು, ಓರ್ವ ವ್ಯಕ್ತಿ ಕೊಲೆಯಾಗಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಚನ್ನಪಟ್ಟಣ ತಾಲೂಕಿನ ಕಲ್ಲಹಳ್ಳಿ ಗೇಟ್ ಬಳಿ ನಡೆದಿದೆ. ಮದ್ಯ ಪಾರ್ಟಿ ವೇಳೆ ನೀರು ಕೊಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ. ವಡ್ಡರಹಟ್ಟಿ ಗ್ರಾಮದ ನಾಗೇಶ್ (30) ಕೊಲೆಯಾದ ಯುವಕ. ಅಲ್ಲದೇ, ಘಟನೆಯಲ್ಲಿ ಮೋಹನ್, ಮಂಜು ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ನೇಹಿತರಾದ ನಾಗೇಶ್, ರಾಮಚಂದ್ರ, ಮಂಜು, ಚೇತು ಸ್ಚಾಮಿ ಮತ್ತು ಶಿವು, ವಡ್ಡರಹಟ್ಟಿಯ ನಾಗೇಶ್ , ರಾಮಚಂದ್ರ, ಮಂಜು ಹಾಗೂ ಸಾಣೇನಹಳ್ಳಿಯ, ಚೇತು, ಸ್ವಾಮಿ, ಶಿವು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ನಂತರ ಚೇತು ಗೆಳೆಯರು, ನಾಗೇಶ್ ಕಡೆಯವರನ್ನ ನೀರು ಕೇಳಿದ್ದಾರೆ. ಆದ್ರೆ, ನಾಗೇಶ್ ನೀರು ಕೊಡಲು ನಿರಾಕರಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದಿದೆ. ಕೂಡಲೇ ಶಿವು ಮತ್ತು ಸ್ವಾಮಿ ಫೋನ್ ಮಾಡಿ ಬೇರೆ ಹುಡುಗರನ್ನ ಸ್ಥಳಕ್ಕೆ ಕರೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ನಾಲ್ಲೈದು ಯುವಕರು ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದು, ನಾಗೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಅಲ್ಲದೇ, ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.