ಉರ್ಫಿ ಜಾವೇದ್ ವಿರುದ್ಧ ಸಮನ್ಸ್ ಜಾರಿ ಮಾಡಿದ ಮುಂಬೈ ಪೊಲೀಸರು….
ಅರೆ ಬರೆ ಬಟ್ಟೆ ತೊಟ್ಟು ಟ್ರೋಲ್ ಆದ್ರೂ ತಲೆ ಕೆಡಿಸಿಕೊಳ್ಳದೇ ಮಾಡಿದ್ದೇ ಮಾಡುವ ಜಾಯಮಾನದವರು ಸೋಷಿಯಲ್ ಮೀಡಿಯಾ ಸೆನ್ಷೇಷನ್ ಉರ್ಫಿ ಜಾವೇದ್.. ಇದೀಗ ಉರ್ಫಿ ಜಾವೇದ್ ಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ..
ಉರ್ಫಿ ಜಾವೇದ್ ಅಶ್ಲೀಲವೆನಿಸುವಂತಹ ಬಟ್ಟೆ ಧರಿಸಿ ಸಾರ್ವಜನಿಕವಾಗಿ ಮುಂಬೈ ರಸ್ತೆಗಳಲ್ಲಿ ಓಡಾಟ ಮಾಡುತ್ತಾರೆ.. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾರಾಷ್ಟ್ರ ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ದೂರು ನೀಡಿದ್ದರು. ಇದೇ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಉರ್ಫಿ ಜಾವೇದ್ ಅವರಿಗೆ ತಿಳಿಸಿದ್ದೇವೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲ್ಲದೇ ಸಂವಿಧಾನ ಕೊಟ್ಟಿರುವ ನಡತೆ ಹಕ್ಕು, ಆಲೋಚನಾ ಸ್ವಾತಂತ್ರ್ಯ ಇಂತಹ ವಿಧ್ವಂಸಕ ಧೋರಣೆಯಲ್ಲಿ ಪ್ರಕಟವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅವರು ತಮ್ಮ ದೇಹ ಪ್ರದರ್ಶನ ಮಾಡಬೇಕಾದರೆ ನಾಲ್ಕು ಗೋಡೆಗಳ ಮಧ್ಯೆ ಮಾಡಲಿ. ಅವರ ವರ್ತನೆ ಸಮಾಜದ ವಿಕೃತ ಮನೋಭಾವಕ್ಕೆ ಉತ್ತೇಜನ ನೀಡುತ್ತದೆ ಎನ್ನುವ ಅರಿವು ಅವರಿಗೆ ಇಲ್ಲವೆನಿಸುತ್ತಿದೆ ಎಂದು ವಾಘ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Urfi Javed: Mumbai police has issued a summons against Urfi Javed.