ಉಕ್ರೇನ್ ಗೆ ಅಮೆರಿಕ 200 ಮಿಲಿಯನ್ ಡಾಲರ್ ಸಹಾಯ – Saaksha Tv
ಅಮೆರಿಕ: ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದ್ದು, ಉಕ್ರೇನ್ ಗೆ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳಿಗೆ 200 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ನೀಡಲು ಅಮೆರಿಕ ನಿರ್ಧರಿಸಿದೆ.
ಉಕ್ರೇನ್ ಗೆ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳಿಗೆ 200 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ನೀಡಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅನುಮೋದನೆ ನೀಡಿದ್ದಾರೆ. ಅಲ್ಲದೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಾಲ್ಕನೇ ಬಾರಿಗೆ ಅಮೆರಿಕ ಉಕ್ರೇನ್ಗೆ ಸಹಕಾರ ನೀಡುತ್ತಿದ್ದು, ಜನವರಿ 2021ರಿಂದ ಈವರೆಗೆ 1.2 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಭದ್ರತಾ ಸಹಾಯವನ್ನಾಗಿ ನೀಡಲಾಗಿದೆ ಎಂದು ಶ್ವೇತಭವನ ಟ್ವೀಟ್ನಲ್ಲಿ ತಿಳಿಸಿದೆ.
ರಷ್ಯಾದ ಅಪ್ರಚೋದಿತ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್‌ನ ಸೈನಿಕರಿಗೆ ರಕ್ಷಾ ಕವಚಗಳು, ವಿಮಾನ ಹೊಡೆದುರಳಿಸಬಲ್ಲ ಸಾಧನಗಳು ಮತ್ತು ಹಲವು ಶಸ್ತ್ರಾಸ್ತ್ರಗಳಿಗಾಗಿ ತಕ್ಷಣದ ನೆರವು ನೀಡಲಾಗುತ್ತಿದೆ ಎಂದು ಅಮೆರಿಕನ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.