ಯುಎಸ್ ಎ ತಂಡವು ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದು ಬೀಗಿದೆ.
ಬಾಂಗ್ಲಾ ವಿರುದ್ಧದ ಸರಣಿಯನ್ನು ಯುಎಸ್ ಎ 1-2 ಅಂತರದಿಂದ ಗೆದ್ದು ಬೀಗಿದೆ. ಮೊದಲೆರಡು ಪಂದ್ಯಗಳನ್ನು ಯುಎಸ್ ಎ ಗೆದ್ದಿದ್ದರೆ, ಮೂರನೇ ಪಂದ್ಯವನ್ನು ಬಾಂಗ್ಲಾದೇಶ ಗೆದ್ದಿದೆ. ಈ ಮೂಲಕ ಬಾಂಗ್ಲಾ ವಿರುದ್ಧ ಚೊಚ್ಚಲ ಬಾರಿ ಸರಣಿ ಗೆಲ್ಲುವಲ್ಲಿ ಯುಎಸ್ಎ ಯಶಸ್ವಿಯಾಗಿದೆ.
ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಯುಎಸ್ ಎ ತಂಡ 19.3 ಓವರ್ ಗಳಲ್ಲಿಯೇ 5 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿ ಜಯ ಸಾಧಿಸಿತ್ತು.
ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತ್ತು. ಆದರೆ, ಯುಎಸ್ ಎನ ಉತ್ತಮ ಬೌಲಿಂಗ್ ಗೆ ಬಾಂಗ್ಲಾ ತತ್ತರಿಸಿ ಹೋಗಿತ್ತು. 19.3 ಓವರ್ ಗಳಲ್ಲಿ ಬಾಂಗ್ಲಾ 138 ರನ್ ಗಳನ್ನು ಮಾತ್ರ ಗಳಿಸಿತ್ತು. ಈ ಮೂಲಕ 6 ರನ್ ಗಳ ರೋಚಕ ಗೆಲುವು ಸಾಧಿಸಿತ್ತು.
ಕೊನೆಯ ಪಂದ್ಯದಲ್ಲಿ ಯುಎಸ್ಎ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 104 ರನ್ ಮಾತ್ರ ಗಳಿಸಿತು. ಬಾಂಗ್ಲಾ ತಂಡ 11.4 ಓವರ್ ಗಳಲ್ಲಿ ಗುರಿ ತಲುಪಿ ಗೆಲುವಿನ ದಡ ಸೇರಿತು.