ಆರ್ ಸಿಬಿ ಜರ್ಸಿಯಲ್ಲಿ ಉಸೈನ್ ಬೋಲ್ಟ್ : ನೀವು ನಮ್ಮ ತಂಡದಲ್ಲಿದ್ದೀರಿ ಎಂದ ಕೊಹ್ಲಿ
ಬೆಂಗಳೂರು : ಐಪಿಎಲ್ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕ್ರಿಕೆಟ್ ಹಬ್ಬದ ಸಂಭ್ರಮ, ಸಡಗರದಲ್ಲಿ ಮಿಂದೇಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ನಾಳೆ ಐಪಿಎಲ್ 2021 ಶುರುವಾಗಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯಕ್ಕಾಗಿ ಎರಡೂ ತಂಡಗಳ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಟೈ ನೋಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಆರ್ ಸಿಬಿ ಅಭಿಮಾನಿಗಳಂತೂ ಈ ಬಾರಿ ಕಪ್ ನಮ್ದೆ ಅಂತ ಮತ್ತೆ ಅಭಿಯಾನ ಶುರು ಮಾಡಿದ್ದಾರೆ.
ಈ ಮಧ್ಯೆ ಜಮೈಕಾ ದೇಶದ ವಿಶ್ವ ಪ್ರಸಿದ್ಧ ವೇಗದ ಓಟಗಾರ ಉಸೈನ್ ಬೋಲ್ಟ್ ಆರ್‍ಸಿಬಿ ಜರ್ಸಿ ತೊಟ್ಟು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ವಿರಾಟ್, ಎಬಿಡಿ ಕಾಲೆಳೆದಿದ್ದಾರೆ.
ಬೋಲ್ಟ್ ತಮ್ಮ ಟ್ವೀಟ್ ನಲ್ಲಿ ‘ಚಾಲೆಂಜರ್ಸ್, ನಿಮಗೆ ಗೊತ್ತಿರಲಿ, ಈವರೆಗೂ ನಾನೇ ಜಗತ್ತಿನ ಅತ್ಯಂತ ವೇಗದ ಬೆಕ್ಕು’ ಎಂದಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕವೇ ಉತ್ತರಿಸಿದ ಕೊಹ್ಲಿ, ‘ನೊ ಡೌಟ್ ಅದಕ್ಕಾಗಿ ನೀವೀಗ ನಮ್ಮ ತಂಡದಲ್ಲಿದ್ದೀರಿ’ ಎಂದಿದ್ದಾರೆ.
ಇನ್ನ ಎಬಿಡಿ ಟ್ವೀಟ್ ಮಾಡಿ ತಂಡಕ್ಕೆ ಒಂದುವೇಳೆ ಹೆಚ್ಚು ರನ್‍ಗಳು ಬೇಕಿದ್ದರೆ ಯಾರನ್ನು ಕರೆಯಬೇಕೆಂದು ನಮಗೆ ಗೊತ್ತಿದೆ ಎಂದು ತಮಾಷೆ ಮಾಡಿದ್ದಾರೆ
