ವೇಗ ದೂತ ಉಸೇನ್ ಬೋಲ್ಟ್ ಗೂ ಕೊರೋವಾ ಪಾಸಿಟಿವ್…
ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಗೆ ಕೊರೋನಾ ಸೋಂಕು ದೃಢವಾಗಿದೆ. ಈ ವಿಚಾರವನ್ನು ಸ್ವತಃ ಉಸೇನ್ ಬೋಲ್ಟ್ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಉಸೇನ್ ಬೋಲ್ಟ್ ಅವರು ತನ್ನ 34ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.
ಕಳೆದ ಶನಿವಾರ ನಾನು ಕೋವಿಡ್-19 ಟೆಸ್ಟ್ ಮಾಡಿಸಿದ್ದೆ. ವರದಿಯಲ್ಲಿ ಪಾಸಿಟಿವ್ ಅಂತ ಗೊತ್ತಾಗಿದೆ. ಆದ್ರೆ ನನಗೆ ಕೋವಿಡ್-19 ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಆದ್ರೂ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಗೆಳೆಯರಿಂದ ದೂರವಿದ್ದೇನೆ ಎಂದು ಉಸೇನ್ ಬೋಲ್ಟ್ ಟ್ವಿಟ್ ಮಾಡಿದ್ದಾರೆ.
ತನ್ನ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಉಸೇನ್ ಬೋಲ್ಟ್ ಕೋವಿಡ್-19 ಸೋಂಕು ಪತ್ತೆಯಾಗಿದೆ. ಬರ್ತ್ ಡೇ ಪಾರ್ಟಿಯಲ್ಲಿ ಉಸೇನ್ ಬೋಲ್ಟ್ ಅವರ ಸ್ನೇಹಿತರು ಕೂಡ ಭಾಗಿಯಾಗಿದ್ದರು. ಇಂಗ್ಲೆಂಡ್ ಫುಟ್ ಬಾಲ್ ಆಟಗಾರ ರಹೀಮ್ ಸ್ಟಿರ್ಲಿಂಗ್, ಕೆರೆಬಿಯನ್ ಕ್ರಿಕೆಟ್ ನ ದೈತ್ಯ ಕ್ರಿಸ್ ಗೇಲ್ ಮೊದಲಾದವರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಉಸೇನ್ ಬೋಲ್ಟ್ ವಿಶ್ವದ ಅಪ್ರತಿಮ ಓಟಗಾರ. ವಾಯು ವೇಗದಲ್ಲಿ ಓಡುತ್ತಿದ್ದ ಬೋಲ್ಟ್ ಹಲವು ದಾಖಲೆಗಳ ಒಡೆಯ ಕೂಡ ಹೌದು. 100 ಮೀಟರ್ ಮತ್ತು ಇನ್ನೂರು ಮೀಟರ್ ಓಟದಲ್ಲಿ ಈಗಲೂ ಬೋಲ್ಟ್ ಹೆಸರಿನಲ್ಲಿ ವಿಶ್ವ ದಾಖಲೆ ಇದೆ. ಹಾಗೇ 11 ಬಾರಿ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ. 2009ರಿಂದ 2015ರವರೆಗೆ 100 ಮೀಟರ್, 200 ಮೀಟರ್ ಮತ್ತು 4/100 ಮೀಟರ್ ರಿಲೆಯಲ್ಲಿ ಸತತವಾಗಿ ಚಿನ್ನ ಗೆದ್ದುಕೊಂಡಿದ್ದಾರೆ. ಒಲಿಂಪಿಕ್ಸ್ ನಲ್ಲೂ ಚಿನ್ನದ ಬೇಟೆಯಾಡಿದ್ದರು. ಉಸೇನ್ ಬೋಲ್ಟ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಹಾರೈಕೆಯಾಗಿದೆ.








