ಶೇರ್ ಇಟ್ , ಸೆಂದೆರ್, ಇ ಸ್ ಫೈಲ್ ಎಕ್ಸ್ಪ್ಲೋರರ್ ಬದಲು ಶೇರ್ ಆಲ್ ಮತ್ತು ಝೆಡ್ ಶೇರ್ ಬಳಸಿ

1 min read

ಶೇರ್ ಇಟ್ , ಸೆಂದೆರ್, ಇ ಸ್ ಫೈಲ್ ಎಕ್ಸ್ಪ್ಲೋರರ್ ಬದಲು ಶೇರ್ ಆಲ್ ಮತ್ತು ಝೆಡ್ ಶೇರ್ ಬಳಸಿ

ಹೊಸದಿಲ್ಲಿ, ಜುಲೈ14: ಆದೇಕೋ ಚೀನಾ ಅಪ್ ಎದುರು ನಾವು ನಮ್ಮ ದೇಶೀಯ ಆಪ್ ಗಳ ಬಗ್ಗೆ ಗಮನಹರಿಸಿದ್ದು ಕಮ್ಮಿ. ಸರಕಾರ ಚೀನಾ ಆಪ್ ಗಳನ್ನೂ ದೇಶದ ಹಿತರಕ್ಷಣೆಯಡಿಯಲ್ಲಿ ನಿಷೇಧ ಮಾಡಿದ್ದಾಗ ಮರುಕಪಟ್ಟ ಭಾರತೀಯರಿಗೇನು ಕಮ್ಮಿ ಇರಲಿಲ್ಲ. ಇದರಲ್ಲಿ ಪ್ರಮುಖವಾಗಿ ಶೇರ್ ಇಟ್ , ಸೆಂದೆರ್, ಇ ಸ್ ಫೈಲ್ ಎಕ್ಸ್ಪ್ಲೋರರ್ ಸೇರಿತ್ತು. ಹಾಗಾದರೆ ಈ ಆಪ್ ಗಳಿಂದ ಏನೆಲ್ಲಾ ಪ್ರಯೋಜನವಿತ್ತು ಎಂದು ನೋಡೋಣ.

ಶೇರ್ ಇಟ್ :
ಈ ಆಪ್ ಬಳಕೆದಾರರು ತಮ್ಮ ಫೋಟೋ, ವಿಡಿಯೋ, ಮ್ಯೂಸಿಕ್ , ಕಾಂಟ್ಯಾಕ್ಟ್ಸ್ , ಆಪ್ ಮತ್ತು ಇತರ ಫೈಲ್ಸ್ ಗಳನ್ನೂ ಇತರ ಮೊಬೈಲ್ ಮತ್ತು ಪರ್ಸನಲ್ ಕಂಪ್ಯೂಟರ್ ಗಳಿಗೆ , ಯಾವುದೇ ಇಂಟರ್ನೆಟ್ ಅಗತ್ಯವಿಲ್ಲದೆ ವರ್ಗಾಯಿಸಬಹುದಾಗಿದೆ.

ಕ್ಸೆಂಡರ್:
ಈ ಆಪ್ ಮೂಲಕ ವೀಡಿಯೊ , ಚಿತ್ರ ಮತ್ತು ಇತರ ಫೈಲ್ಸ್ ಅಥವಾ ಡಾಕ್ಯುಮೆಂಟ್ಸ್ ಗಳನ್ನೂ ಆಫ್‌ಲೈನ್ ಹಂಚಿಕೆ ಅಥವಾ ವರ್ಗಾವಣೆ ಮಾಡಬಹುದಾಗಿತ್ತು. 2011 ರಲ್ಲಿ ಕ್ಸೆಂಡರ್ ಡಿಜಿಟಲ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ ಈ ಆಪ್ ಇಂದು ವಿಶ್ವದಾದ್ಯಂತ 100 ಮಿಲಿಯನ್ ಡೌನ್‌ಲೋಡ್‌ ಆಗಿದ್ದು ಆಂಡ್ರಾಯ್ಡ್ ಬಳಕೆದಾರರಲ್ಲಿ ಜನಪ್ರಿಯವಾಗಿದೆ.

ಇ ಸ್ ಫೈಲ್ ಎಕ್ಸ್ಪ್ಲೋರರ್ :
ಆಂಡ್ರಾಯ್ಡ್ ಬಳಕೆದಾರರು ತಮ್ಮ ಫೈಲ್ ಗಳ ಶೇರಿಂಗ್ /ಮ್ಯಾನೇಜ್ ಮಾಡಲು ಇ ಸ್ ಗ್ಲೋಬಲ್,( ಡಿ ಓ ಗ್ಲೋಬಲ್ ನ ಅಂಗಸಂಸ್ಥೆ) ಈ ಆಪ್ ಅಭಿವೃದ್ಧಿಪಡಿಸಿತ್ತು. ಈಗಾಗಲೇ ಗೂಗಲ್ ಪ್ಲೇ ಸ್ಟೋರಿನಲ್ಲಿ ನಕಲಿ ಜಾಹಿರಾತು ನೀಡಿದ ಕಾರಣ ಈ ಆಪ್ ಅನ್ನು ತೆಗೆದುಹಾಕಲಾಗಿತ್ತು.

ಹಾಗಾದರೆ ಇದಕ್ಕೆ ನಮ್ಮ ದೇಶದಲ್ಲಿ ಪರ್ಯಾಯ ಆಪ್ ಲಭ್ಯತೆ ಇಲ್ಲವೇ? ಖಂಡಿತ ಇದೆ. ಆದರೆ ಚೀನಾ ವ್ಯಾಮೋಹಕ್ಕೆ ನಮ್ಮ ದೇಸಿ ಆಪ್ ಗಳು ಮೂಲೆಗುಂಪಾದವು. ಇನ್ನೊಂದು ಪ್ರಮುಖ ಕಾರಣ ಹೆಚ್ಚಿನ ಫೋನ್ ಚೀನಾದಲ್ಲಿ ತಯಾರಾಗುವ ಕಾರಣ ಅವರ ದೇಶೀಯ ಆಪ್ ಗಳ ಉತ್ತೇಜನಕ್ಕೆ ಆಪ್ ಗಳನ್ನೂ ಪೂರ್ವನಿಯೋಜಿತವಾಗಿ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಸೇರಿಸಲಾಗುತ್ತದೆ. ಹಾಗಾದರೆ ಯಾವೆಲ್ಲ ದೇಸಿ ಆಪ್ ಗಳು ಇದಕ್ಕೆ ಪರ್ಯಾಯವಾಗಿ ಲಭ್ಯವಿದೆ ನೋಡೋಣ.

ಶೇರ್ ಆಲ್ :

ಇದು ಆಂಡ್ರಾಯ್ಡ್ ತಂತ್ರಜ್ಞಾನದ ಫೈಲ್ ಶೇರಿಂಗ್ ಆಪ್ , ಇದನ್ನು ಭಾರತದ ಸ್ಟಾರ್ಟ್ ಅಪ್ ಸಂಸ್ಥೆಯಾದ ಕ್ವಾಂಟಮ್4ಯು ಲ್ಯಾಬ್ ಅಭಿವೃದ್ಧಿಪಡಿಸಿದ್ದು, ಬಳಕೆದಾರರು ಈ ಆಪ್ ಮೂಲಕ ಫೈಲ್ , ಮೂವಿ , ವಿಡಿಯೋ, ಅಪ್ಸ್ ಇತ್ಯಾದಿಗಳನ್ನೂ ಇತರ ಆಂಡ್ರಾಯ್ಡ್ ಆಪ್ ಗಳಿಗೆ ಯಾವುದೇ ಇಂಟರ್ನೆಟ್ ಇಲ್ಲದೆ ವರ್ಗಾಯಿಸಬಹುದಾಗಿದೆ. ಇನ್ನು ಐಓಸ್ ಮತ್ತು ಡೆಸ್ಕ್ಟಾಪ್ ವೆಬ್ ಅಪ್ಪ್ಲಿಕೆಶನ್ಸ್ ಪ್ರಗತಿಯಲ್ಲಿದ್ದು ಅತಿ ಶೀಘ್ರ ಬರಲಿದೆ. ಈ ಆಪ್ ಬಳಕೆದಾರರ ಗೌಪ್ಯತೆ ಕಾಪಾಡಲು ಪಾಸ್ವರ್ಡ್ ಹೊಂದಿದ್ದು ಗ್ರಾಹಕರಿಗೆ ಭಯವಿಲ್ಲ ಇನ್ನು ವಿಶೇಷವೆಂದರೆ ಇದು ಜಂಕ್ ಫೈಲ್ಸ್ , ಕ್ಯಾಶೆ ಮತ್ತು ಡೂಪ್ಲಿಕೇಟ್ ಫೈಲ್ಸ್ ಕ್ಲೀನ್ ಮಾಡಿ ಕೊಡಲಾಗುತ್ತೆ.

ಝೆಡ್ ಶೇರ್ :

ಇದು ನಮ್ಮ ಕರುನಾಡಿನ ಆಪ್. ಧಾರವಾಡ ಜಿಲ್ಲೆಯ ಶ್ರವಣ್ ಹೆಗ್ಡೆಯ ಈ ಆಪ್ ಅನ್ನು ಅಭಿವೃದ್ಧಿಪಡಿಸಿದ್ದು ಬಳಕೆದಾರರು ಚಿತ್ರ, ವೀಡಿಯೊ ಮತ್ತು ಪಿಡಿಎಫ್‌ಗಳಂತಹ ಫೈಲ್‌ಗಳನ್ನು ವರ್ಗಾಯಿಸುತ್ತದೆ. ಆಂಡ್ರಾಯ್ಡ್‌ನಲ್ಲಿ ಮೊಬೈಲ್ನಲ್ಲಿ ಲಭ್ಯವಿದೆ, ವರ್ಗಾವಣೆಯ ಸರಾಸರಿ ವೇಗ 6 ಎಮ್‌ಬಿಪಿಎಸ್ ಮತ್ತು ಪ್ಲೇಸ್ಟೋರ್‌ನಲ್ಲಿ 4.9 ರೇಟಿಂಗ್ ಹೊಂದಿದೆ. ಕೆಲವೇ ದಿನಗಳಲ್ಲಿ ಇದನ್ನು 100,000 ಬಾರಿ ಡೌನ್‌ಲೋಡ್ ಮಾಡಲಾಗಿದೆ.

ನಮ್ಮಲ್ಲಿ ಚೀನೀ ಆಪ್ ಗಳಿಗೆ ಪರ್ಯಾಯ ಆಪ್ ಗಳಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ವದೇಶಿ ಆಪ್ ಗಳು ಅಭಿವೃದ್ಧಿಯಾಗಲಿ ಎನ್ನುವುದೇ ನಮ್ಮೆಲ್ಲರ ಆಶಯ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd