ಮಂಗಳೂರು : ಪಿಪಿಇ ಕಿಟ್ ಧರಿಸದೇ ಶಾಸಕ ಯು.ಟಿ ಖಾದರ್, ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನಡೆಸಿದ್ದಾರೆ.
70 ವರ್ಷದ ವೃದ್ಧ ನಿನ್ನೆ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಸಂಜೆ ಮಂಗಳೂರಿನ ಬೋಳಾರ ಮಸೀದಿಯ ದಫನ ಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯ್ತು. ಈ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಶಾಸಕ ಯು.ಟಿ ಖಾದರ್ ಕೂಡ ಪಾಲ್ಗೊಂಡಿದ್ದರು.
ಸ್ವತಃ ಖಾದರ್ ಅವರೇ ಮಸೀದಿ ಭೂಮಿಯಲ್ಲಿ ಗುಂಡಿ ತೆಗೆದು ಮೃತದೇಹವನ್ನು ಗುಂಡಿಯಲ್ಲಿಟ್ಟು ಮಣ್ಣು ಮುಚ್ಚುವ ಕೆಲಸ ಮಾಡಿದರು. ಆದ್ರೆ ಈ ವೇಳೆ ಅವರು ಪಿಪಿಇ ಕಿಟ್ ಧರಿಸಿರಲಿಲ್ಲ. ಇದು ಇದೀಗ ಚರ್ಚೆಗೆ ಗ್ರಾಸವಾಗಿದೆ.