ಉಳ್ಳಾಲ ನಗರಸಭಾ ವ್ಯಾಪ್ತಿಯ ಚೆಂಬುಗುಡ್ಡೆ ಮಸೀದಿಯಲ್ಲಿ ವಾರದ ಹಿಂದೆ ಪ್ರಾರ್ಥನೆ ಸಲ್ಲಿಸಿದ ಸ್ಥಳಿಯ ನಿವಾಸಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಸುತ್ತಮುತ್ತಲಿನ ಜನರು ಆರೋಗ್ಯ ತಪಾಸಣೆಗೆ ಒಳಗಾಗಬೇಕೆಂದು ಮಾಜಿ ಸಚಿವ ಯು ಟಿ ಖಾದರ್ ಅವರು ಇಲ್ಲಿನ ಮಸೀದಿ ಮೈಕ್ ಮೂಲಕ ಮನವಿ ಮಾಡಿದರು.
ದೆಹಲಿಗೆ ತೆರಳಿದ್ದ ತೊಕ್ಕೊಟ್ಟು ಮೂಲದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಆತ ಹಲವು ಬಾರಿ ಚೆಂಬುಗುಡ್ಡೆ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಆಗಮಿಸಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಮುಸ್ಲಿಂ ಬಾಂಧವರು ಮತ್ತು ನಾಗರಿಕರು ತಪಾಸಣೆಗೆ ಒಳಗಾಗುವಂತೆ ಶಾಸಕ ಯು ಟಿ ಖಾದರ್ ಮೈಕ್ ಮೂಲಕ ಮನವಿ ಮಾಡಿದರು.
ತೊಕ್ಕೊಟ್ಟು ಮೂಲದ ಉಳ್ಳಾಲ ನಗರಸಭಾ ವ್ಯಾಪ್ತಿಯ ಚೆಂಬುಗುಡ್ಡೆ ನಾಗರಿಕರೊಬ್ಬರಿಗೆ ಇತ್ತೀಚೆಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಚೆಂಬುಗುಡ್ಡೆ ಮಸೀದಿ ಪರಿಸರದ ಎಲ್ಲಾ ನಾಗರಿಕರು ಆರೋಗ್ಯ ತಪಾಸಣೆಗೆ ಒಳಪಡುವಂತೆ ಮತ್ತು ಆರೋಗ್ಯ ಇಲಾಖೆ ತಂಡದ ಜೊತೆ ಸಹಕರಿಸುವಂತೆ ಶಾಸಕ ಯು ಟಿ ಖಾದರ್ ಮಸೀದಿ ಮೈಕ್ ನಲ್ಲಿ ಮನವಿ ಮಾಡಿದರು ಮತ್ತು ಸ್ವತಃ ತಾನು ಕೂಡ ತಪಾಸಣೆಗೆ ಒಳಗಾದರು. ಇದರಿಂದಾಗಿ ಬಹಳಷ್ಟು ನಾಗರಿಕರು ಸ್ವಯಂ ಪ್ರೇರಿತರಾಗಿ ಆಗಮಿಸಿ ತಪಾಸಣೆಗೆ ಒಳಗಾದರು.
ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ
ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ ಮಿಂಚಿನ ಸಂಚಾರಕ್ಕೆ ಕಾರಣವಾದ ಮೇಲುಕೋಟೆ ಶಾಸಕ ಸ್ಥಳದಲ್ಲೇ ಸಮಸ್ಯೆಗಳ ಪರಿಶೀಲನೆ ಮತ್ತು ಅಧಿಕಾರಿಗಳೊಂದಿಗೆ...








