ಕೊರೊನಾ ಕಾಟದ ಮಧ್ಯೆ ಡೆಂಗ್ಯೂ ಆರ್ಭಟ

1 min read

ಕೊರೊನಾ ಕಾಟದ ಮಧ್ಯೆ ಡೆಂಗ್ಯೂ ಆರ್ಭಟ Dengue

ಬೆಂಗಳೂರು : ದೇಶದಲ್ಲಿ ಕೊರೊನಾ ಸೋಂಕಿನ ಕಾಟ ಇನ್ನೂ ಕಡಿಮೆಯಾಗಿಲ್ಲ. ಇದರ ಮಧ್ಯೆ ಡೆಂಗ್ಯೂವಿನ ಸಂಕಷ್ಟ ಎದುರಾಗಿದೆ.

ಉತ್ತರ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಬ್ಬರು ಉಸಿರು ನಿಲ್ಲಿಸಿದ್ದಾರೆ.

ಇದಲ್ಲದೇ ಡೆಂಗ್ಯೂ ರೀತಿಯ ವೈರಲ್ ಜ್ವರದಿಂದಾಗಿ ಉತ್ತರ ಪ್ರದೇಶದಲ್ಲಿ ಈವರೆಗೂ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

 Dengue  saaksha tv

ಅಂದಹಾಗೆ ಡೆಂಗ್ಯೂಯಿಂದಾಗಿ 14 ವರ್ಷದ ಹುಡುಗಿ ವೈದ್ಯಕೀಯ ಕಾಲೇಜಿನಲ್ಲಿ ಸಾವನ್ನಪ್ಪಿದ್ದರೇ ಇನ್ನೊಂದು ಮಗು ಆಸ್ಪತ್ರೆಗೆ ಕರೆತೆರುವ ಮುನ್ನವೇ ಕೊನೆಯುಸಿರೆಳೆದಿದೆ.

ಇನ್ನು ಫಿರೋಜಾಬಾದ್, ಮಥುರಾ, ಆಗ್ರಾ, ಮೈನ್ ಪುರಿಯಲ್ಲಿ ಕಳೆದ ಮೂರು ವಾರಗಳಿಂದ ಡೆಂಗ್ಯೂ ಮತ್ತು ಮಾರಣಾಂತಿಕ ವೈರಲ್ ಜ್ವರ ಹೆಚ್ಚಾಗುತ್ತಿದ್ದು, ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕೇವಲ ಯುಪಿಯಲ್ಲಿ ಅಲ್ಲದೇ ಬೆಂಗಳೂರಿನಲ್ಲೂ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ. ಮೇ ನಿಂದ ಆಗಸ್ಟ್ ವರೆಗೆ 12,203 ಮಾದರಿಗಳಲ್ಲಿ ಡೆಂಗ್ಯೂ ಪರೀಕ್ಷೆ ಮಾಡಲಾಗಿದ್ದು, 1,304 ಪಾಸಿಟಿವ್ ಕಂಡುಬಂದಿದೆ ಎಂದು ಬಿಬಿಎಂಪಿ ತಿಳಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd