ಕಾರು ಖರೀದಿಗಾಗಿ ಸ್ವಂತ ಮಗುವನ್ನೇ ಮಾರಿದ ದಂಪತಿ..!
ಉತ್ತರಪ್ರದೇಶ : ದಂಪತಿಯೊಂದು ಕಾರ್ ಖರೀದಿ ಮಾಡಿ ಶೋಕಿ ಮಾಡುವುದಕ್ಕಾಗಿ ತಮ್ಮ ಸ್ವಂತ ಮಗುವನ್ನೇ ಮಾರಾಟ ಮಾಡಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಕನ್ನೌಜ್ ನಲ್ಲಿ ನಡೆದಿದೆ.
ನವಜಾತ ಶಿಶುವನ್ನು 1.5 ಲಕ್ಷ ರೂಪಾಯಿಗೆ ಮಾರಿದ್ದಾರೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಈ ದಂಪತಿ ಇಂತಹ ನೀಚ ಕೃತ್ಯ ವೆಸಗಿದ್ದಾರೆ. ಈ ಬಗ್ಗೆ ಮಗುವಿನ ತಾತ ಅಜ್ಜಿ ಪೆÇಲೀಸರಿಗೆ ದೂರು ಸಲ್ಲಿಸಿದ್ದಾರೆ. ತಿರ್ವಾ ಕೊತ್ವಾಲಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರ್ಸಹೈಗಂಜ್ ಮೂಲದ ಉದ್ಯಮಿಯೊಬ್ಬರಿಗೆ 3 ತಿಂಗಳ ನವಜಾತ ಶಿಶುವನ್ನ 1.5 ಲಕ್ಷ ರೂ.ಗೆ ಮಾರಿದ್ದಾರೆ ಎಂದು ಮಗುವಿನ ತಾತ ಅಜ್ಜಿ ಆರೋಪ ಮಾಡಿದ್ದಾರೆ. ಅಲ್ಲದೇ ಈ ದುಡ್ಡಿನಿಂದ ಕಾರನ್ನೂ ಖರೀದಿ ಮಾಡಿದ್ಧಾರೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೆÇಲೀಸರು ತನಿಖೆ ಮುಂದುವರೆಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೆÇೀನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.