Uttar Pradesh : 2100 ರುಪಾಯಿ ಎಣಿಸಲು ಬಾರದ ವರ – ಸಿಟ್ಟಿಗೆದ್ದು ಮದುವೆ ರದ್ದುಮಾಡಿದ ವಧು…
ಎರಡು ಸಾವಿರದ ನೂರು ರುಪಾಯಿ ನಗದನ್ನ ಎಣಿಸಲು ಬಾರದಿದ್ದಕ್ಕೆ ಕೋಪಗೊಂಡ ವಧು ಮದುವೆ ರದ್ದು ಮಾಡಿಕೊಂಡು ಕೋಪದಿಂದ ಹೊರಟುಹೋದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿ ನಡೆದಿದೆ.
ವಧುವಿನ ನಿರ್ಧಾರದಿಂದಾಗಿ ಎರಡು ಕುಟುಂಬಳ ನಡುವೆ ಮಾತಿನ ಚಕಮಕಿ ನಡೆದಿದ್ದು ಸಮಸ್ಯೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವರ ಅನಕ್ಷರಸ್ಥ ಎಂಬ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿರುವುದಾಗಿ ಯುವತಿ ಹೇಳಿದ್ದಾಳೆ. ವಧುವಿನ ನಿರ್ಧಾರಕ್ಕೆ ಆಕೆಯ ಕುಟುಂಬದವರೂ ಸಹಮತ ವ್ಯಕ್ತಪಡಿಸಿದ್ದರಿಂದ ಈ ಘಟನೆ ಜಗಳಕ್ಕೆ ಕಾರಣವಾಗಿದೆ.
ಮೂರು ತಿಂಗಳ ಹಿಂದೆ ಮೈನ್‌ಪುರಿ ಪೊಲೀಸ್ ಠಾಣೆಯ ಬಿಚ್ಮಾದ ಬಬಿನಸರ ಗ್ರಾಮದಲ್ಲಿ ವಾಸಿಸುವ ಯುವಕನೊಂದಿಗೆ ದುರ್ಗಾಪುರ ಗ್ರಾಮದ ಯುವತಿ ವಿವಾಹವಾಗಬೇಕಿತ್ತು. ಇದೇ 20 ರಂದು ರಾತ್ರಿ ಮದುವೆ ಸಮಾರಂಭ ನಡೆಯಲಿತ್ತು. ವಧುವಿನ ಸಹೋದರಿಗೆ ವರ ಅನಕ್ಷರಸ್ಥ ಎಂಬ ಅನುಮಾನ ಉಂಟಾಗಿದೆ. ಅಣ್ಣನಿಗೆ 2100 ಕೊಟ್ಟು ಅಳಿಯನಿಗೆ ಕೊಟ್ಟು ಎಣಿಸಲು ಹೇಳಿದ್ದಾಳೆ. ವಧುವಿನ ಸಹೋದರ ವರನ ಬಳಿ ಹೋಗಿ ರೂ. 2100 ಎಂದು ಲೆಕ್ಕ ಹಾಕಲು ಹೇಳಿದ್ದಾನೆ. ಅನಕ್ಷರಸ್ಥನಾಗಿದ್ದರಿಂದ ವರನಿಗೆ ಹಣವನ್ನು ಎಣಿಸಲು ಸಾಧ್ಯವಾಗಲಿಲ್ಲ.
ವರ ಅನಕ್ಷರಸ್ಥ ಎಂದು ತಿಳಿದ ನಂತರ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ಇದಕ್ಕೆ ವಧುವಿನ ಮನೆಯವರು ಆಕ್ಷೇಪ ವ್ಯಕ್ತಪಡಿಸಿದಾಗ, ಇದು ತನ್ನ ಜೀವನದ ವಿಷಯ ಎಂದು ನಿರ್ಧರಿಸಿ ಮದುವೆ ಸಮಾರಂಭದಿಂದ ಹೊರನಡೆದಿದ್ದಾಳೆ. ಇದು ಎರಡು ಕುಟುಂಬಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಇದರಿಂದಾಗಿ ವಧುವಿನ ಕುಟುಂಬಸ್ಥರು ಕೂಡ ಮದುವೆಗೆ ನಿರಾಕರಿಸಿದ್ದರು. ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ತನ್ನ ಮಗಳು ಹೆಚ್ಚು ಓದಿದ್ದಾಳೆ, ಅನಕ್ಷರಸ್ಥರನ್ನು ಮದುವೆಯಾಗುವುದಿಲ್ಲ ಎಂದು ಯುವತಿಯ ತಾಯಿ ಹೇಳಿದ್ದಾರೆ. ಪೊಲೀಸರು ಕೂಡ ವಧುವಿನ ನಿರ್ಧಾರವನ್ನ ಬೆಂಬಲಿಸಿದ್ದರಿಂದ ಎರಡು ಕುಟುಂಬಗಳು ಜಾಗ ಖಾಲಿ ಮಾಡಿವೆ.
Uttar Pradesh : Groom who couldn’t count 2100 rupees – Angry bride called off the wedding…








