Uttara kannada: ಕಾಳಿ ನದಿಯಲ್ಲಿಈಜಲು ಇಳಿದ ವ್ಯಕ್ತಿಯನ್ನ ಎಳೆದೊಯ್ದ ಮೊಸಳೆಗಳು…
ಕಾಳಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯನ್ನು ಮೊಸಳೆಗಳು ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಲ್ಲಿ ನಡೆದಿದೆ.
ಗುಜರಾತ್ ಮೂಲದ ದಾಂಡೇಲಿ ನಿವಾಸಿ ಪೀತಾಂಬರಿ ದಾಸ್ ಎಂಬಾತ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಇಂದು ಬೆಳಗ್ಗೆ ಬೆಳಗ್ಗೆ ಕಾಳಿ ನದಿಯಲ್ಲಿ ಈಜಲು ತೆರಳಿದ್ದ. ದಂಡೆಯ ಮೇಲೆ ಚಪ್ಪಲಿ, ಬಟ್ಟೆಯನ್ನು ಇಟ್ಟು ನದಿಯಲ್ಲಿ ಇಳಿದಿದ್ದಾನೆ. ಈ ವೇಳೆ 2 ಮೊಸಳೆಗಳು ಈತನ ಮೇಲೆ ದಾಳಿ ನಡೆಸಿ ಹೊತ್ತೊಯ್ದಿದೆ.
ಸ್ಥಳೀಯರು ನೋಡಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವ್ಯಕ್ತಿಯ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಕಾಳಿ ನದಿಯಲ್ಲಿ ಮೊಸಳೆಗಳ ಕಾಟ ಹೆಚ್ಚಾಗಿದ್ದರಿಂದ ಸ್ಥಳಿಯರು ನದಿ ಪಾತ್ರಕ್ಕೆ ಇಳಿಯಲು ಭಯ ಪಡುವಂತಾಗಿದೆ. ದಾಂಡೇಲಿ ಸುತ್ತ ಮುತ್ತಾ ಮೊಸಳೆಗಳ ಸಂತತಿ ಹೆಚ್ಚಾಗಿರುವುದಿಂದ ಆಹಾರ ಅರಸಿ ಕೆಲವೊಮ್ಮೆ ನದಿ ಬಿಟ್ಟು ಹೊರ ಬರುತ್ತಿವೆ ಎಂದು ಸ್ಥಳಿಯರು ಹೇಳಿದ್ದಾರೆ.
Uttara Kannada: Crocodiles dragged a man who went down to swim in the Kali river.