Uttara Kannada | ಪರೇಶ್ ಮೇಸ್ತ ಪ್ರಕರಣ ಪುನರ್ ತನಿಖೆ ಅಗತ್ಯ
ಉತ್ತರ ಕನ್ನಡ : ಪರೇಶ್ ಮೇಸ್ತ ಪ್ರಕರಣವನ್ನು ಪುನರ್ ತನಿಖೆ ಮಾಡುವ ಅಗತ್ಯವಿದೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಪರೇಶ್ ಮೇಸ್ತ ಪ್ರಕರಣ ಸಂಬಂಧ ಶಿರಸಿಯಲ್ಲಿ ಮಾತನಾಡಿದ ಕಾಗೇರಿ, ರಾಜ್ಯ ಸರ್ಕಾರವು ಪರೇಶ್ ಮೇಸ್ತ ಪ್ರಕರಣವನ್ನು ಪುನರ್ ತನಿಖೆ ಮಾಡುವ ಅಗತ್ಯವಿದೆ.

ಇದು ಮೇಲ್ನೋಟಕ್ಕೆ ಕಾಣುವಂತೆ ಬಿ ರಿಪೋರ್ಟ್ ಸಲ್ಲಿಸುವ ಘಟನೆಯಲ್ಲ. ಈ ಕುರಿತು ಸಿಎಂ, ಗೃಹ ಸಚಿವರ ಬಳಿ ಮಾತನಾಡಿದ್ದೇನೆ.
ಈ ಹಿಂದೆ ಅನೇಕ ಪ್ರಕರಣಗಳನ್ನು ಪುನರ್ ಪರಿಶೀಲನೆ ಮಾಡಿ ಶಿಕ್ಷೆಗೆ ಒಳಗಾದ ಉದಾಹರಣೆ ಇದೆ.
ಹೀಗಾಗಿ ಈ ಪ್ರಕರಣವನ್ನು ಕೂಡ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿಬಿಐ ತನಿಖೆಗೆ ವಹಿಸುವ ವಿಳಂಬವಾದ ಕಾರಣದಿಂದಾಗಿ ಸಾಕ್ಷ್ಯ ನಾಶ ಆಗಿರಬಹುದು ಎಂಬುವುದು ಎಲ್ಲರ ಅಭಿಪ್ರಾಯವಾಗಿದೆ.
ಆದ್ದರಿಂದ ಅದನ್ನು ಪುನರ್ ಪರಿಶೀಲನೆಗೆ ಒಳಪಡಿಸಲು ಬೇಕಾದ ಕೆಲಸ ಆಗಲಿದೆ ಎಂದು ಹೇಳಿದ್ದಾರೆ.