Uttara Kannada : ಸಮರ್ಪಕ ರಸ್ತೆ ಇಲ್ಲದೇ 8KM ಶವ ಹೊತ್ತು ನಡೆದ ಗ್ರಾಮಸ್ಥರು…
ಸಮರ್ಪಕ ರಸ್ತೆ ಇಲ್ಲದ ಕಾರಣ ಊರಿನ ಗ್ರಾಮಸ್ಥರು ಮೃತ ದೇಹವನ್ನ ಬಿದರಿನ ಬೊಂಬಿಗೆ ಕಟ್ಟಿಕೊಂಡು ಸುಮಾರು 8 km ವರೆಗೆ ಮೃತ ದೇಹವನ್ನ ಹೊತ್ತುಕೊಂಡು ಸಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೆರಡಿ ಗ್ರಾಮದಲ್ಲಿ ನಡೆದಿದೆ.
ಬೆರಡಿ ಗ್ರಾಮದ ದಾಮೋದರ ನೇಮು ನಾಯ್ಕ (68) ಎಂಬ ವ್ಯಕ್ತಿ ಗ್ರಾಮದ ಹೊರವಲಯದಲ್ಲಿ ಮರಗಳಿಗೆ ಬೆಂಕಿ ತಗುಲಿದ್ದಾಗ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಮೃತ ವ್ಯಕ್ತಿಯ ಶವವನ್ನ ಬೆರಡಿ ಅಂಕೋಲ ತಾಲೂಕ ಆಸ್ಪತ್ರೆಗೆ ಶವ ಪರೀಕ್ಷೆಗೆಂದು ಕೊಂಡೊಯ್ದಿದ್ದರು, ನಂತರ ಶವವನ್ನ ಪುನಃ ವಾಪಸ್ ತರುವಾಗ ಬಿದಿರಿನ ಬೊಂಬಿಗೆ ಕಟ್ಟಿಕೊಂಡು 8 ಕಿಮಿ ಹೊತ್ತುಕೊಂಡು ಬಂದು ಶವ ಸಂಸ್ಕಾರ ಮಾಡಿದ್ದಾರೆ.
ಜಿಲ್ಲೆಯು ಪಶ್ಚಿಮ ಘಟ್ಟಗಳಿಂದ ಕೂಡಿದ್ದು ಓಡಾಡಲು ಸರಿಯಾದ ರಸ್ತೆಯ ವ್ಯವಸ್ಥೆಯಿಲ್ಲದೇ ಇಂದು ಶವವನ್ನ ಹೊತ್ತು ಸಾಗಿದ ಧಾರುಣ ಘಟನೆ ನಡೆದಿದೆ. ಆಂಕೋಲ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದೆ.
Uttara Kannada : Villagers walked 8KM carrying dead body without adequate road…