ಉತ್ತರಕಾಂಡ್ ನಲ್ಲಿ ಹಿಮಕುಸಿತ : ನದಿಯ ನೀರಿನ ಮಟ್ಟ ಮತ್ತೆ ಏರಿಕೆ – ರಕ್ಷಣಾ ಕಾರ್ಯಾಚರಣೆ ಸ್ಥಗಿತ..!
ಉತ್ತರಖಂಡ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಹಿಮಸ್ಪೋಟದಲ್ಲಿ ಇಲ್ಲಿವರೆಗೆ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. 5ನೇ ದಿನವೂ ಶೋಧ ಮುಂದುವರೆದಿದ್ದು, 176 ಮಂದಿ ಈವರೆಗೂ ನಾಪತ್ತೆಯಾಗಿದ್ದಾರೆ. ಇದೀಗ ಅಲಕಾನಂದ ನದಿಯಲ್ಲಿ ಮತ್ತೆ ನೀರಿನ ಮಟ್ಟ ಏರಿಕೆಯಾಗಿದ್ದು, ಅಲ್ಲಿನ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇನ್ನು ಸುರಂಗ ಮಾರ್ಗ ರಕ್ಷಣಾ ಕಾರ್ಯವನ್ನ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇತ್ತ ನದಿ ನೀರಿನ ಮಟ್ಟ ಏಕಾಏಕಿ ಏರಿಕೆಗೆ ಕಾರಣವೇನು ಅನ್ನೋದು ಇನ್ನೂವರೆಗೂ ತಿಳಿದುಬಂದಿಲ್ಲ. ಹೀಗಾಗಿ ಕಾರ್ಮಿಕರ ಪತ್ತೆಗಾಗಿ ನಡೆಯುತ್ತಿದ್ದ ರಕ್ಷಣಾ ಕಾರ್ಯಾಚರಣೆಯನ್ನ ಸಧ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಹಿಮಸುನಾಮಿಯಿಂದಾಗಿ ತತ್ತರಿಸಿಹೋಗಿರುವ ಚಮೋಲಿ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಹಾಗಾಗಿ ಗ್ರಾಮಸ್ಥರು ಕೆಲಸವನ್ನ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಲಾಗಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ.
ಉತ್ತರಕಾಂಡ್ ನಲ್ಲಿ ಹಿಮಕುಸಿತ : 34 ಮಮದಿ ಸಾವು , 204 ಮಂದಿ ನಾಪತ್ತೆ, ಇಬ್ಬರ ರಕ್ಷಣೆ..!
‘ಸೈನೈಡ್ ಮಲ್ಲಿಕಾ’ ಮೀಟ್ಸ್ ‘ ಸೈನೈಡ್ ಮೋಹನ್’ ತೆರೆಗೆ ಬರಲು ರೆಡಿಯಾಗ್ತಿದೆ ಕ್ರೈಂ ಸ್ಟೋರಿ!
ಬುಲೆಟ್ ಪ್ರಿಯರಿಗೆ ಶಾಕ್ : ರಾಯಲ್ ಎನ್ ಫೀಲ್ಡ್ ಬೆಲೆ ಹೆಚ್ಚಳ ಸಾಧ್ಯತೆ..!
ಮಹಿಳಾ ಪ್ರತಿಭಟನಾಕಾರರನ್ನು ನಾಯಿಗಳು ಎಂದ ತೆಲಂಗಾಣ ಸಿಎಂ : ಕ್ಷಮೆಯಾಚನೆಗೆ ಪ್ರತಿಪಕ್ಷ ನಾಯಕರ ಒತ್ತಾಯ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel