ಉತ್ತರಕಾಂಡದಲ್ಲಿ ಹಿಮಕುಸಿತ : ಹಿಮಸ್ಫೋಟಕ್ಕೆ ಚೀನಾ ಕಾರಣ..?
ನರಿ ಬುದ್ದಿಯಿರೋ ಚೀನಾ ಸದಾ ಕಾಲು ಕೆರೆದುಕೊಂಡು ಭಾರತದ ಜೊತೆಗೆ ಕ್ಯಾತೆ ತೆಗೆಯುತ್ತಲೇ ಇರುತ್ತೆ. ಲಡಾಕ್, ಗಡಿ ವಿವಾದ ಹೀಗೆ ಭಾರತದ ವಿರೋಧ ಕಟ್ಟಿಕೊಂಡು ವಿಶ್ವದಿಂದಲೇ ಛೀಮಾರಿ ಹಾಕಿಸಿಕೊಂಡಿದೆ ಈ ಚೀನಾ. ಆದ್ರೆ ಇದೀಗ ಮತ್ತೊಂದು ಬೆಚ್ಚಿ ಬೀಳಿಸುವ ಸುದ್ದಿ ಹೊರಬಿದ್ದಿದೆ. ಹೌದು ಅದೇನೆಂದ್ರೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾಗಿರುವ ಹಿಮ ಪ್ರವಾಹದ ಹಿಂದೆ ಚೀನಾದ ಕೈವಾಡವಿದೆ ಎಂದು ತಜ್ಞರು ಅಭಿಪ್ರಾಯವನ್ನ ಪಟ್ಟಿದ್ದಾರೆ.

ಭಾರತದ ಭೂ ಪ್ರದೇಶವನ್ನ ಆಕ್ರಮಿಸಲು ಚೀನಾ ಸೇನೆ ಯತ್ನಿಸಿದ ವೇಳೆ ಬಾರತೀಯ ಸೇನೆಯು ತಕ್ಕ ಉತ್ತರವನ್ನೇ ನೀಡಿತ್ತು. ಚೀನಾದ ಆಪ್ ಗಳನ್ನ ನಿಷೇಧಿಸಿ ಚೀನಾದ ಆರ್ಥಿಕತೆಗೆ ಭಾರತ ಸರ್ಕಾರ ಪೆಟ್ಟು ನೀಡಿತ್ತು. ಇಷ್ಟಾದ್ರು ಮುಟ್ಟಾಳ ಚೀನಾಗೆ ಬುದ್ದಿ ಬಂದಂತೆ ಕಾಣ್ತಿಲ್ಲ. ಹುಟ್ಟುಗುಣ ಸುಟ್ರು ಹೋಗಲ್ಲ ಅಂತಾರಲ್ಲ ಹಾಗೆ. ಹಾಗಂತ ಈ ಘಟನೆ ಹಿಂದೆ ಚೀನಾದ ಕೈವಾಡ ಇರೋದು ನಿಜಾನಾ ಅನ್ನೋದು ಪಕ್ಕಾ ಆಗಿಲ್ಲ. ಆದ್ರೆ ಈ ಘಟನೆ ಚಳಿಗಾಲದಲ್ಲಿ ನಡೆದಿರೋದು ತಜ್ಞರ ಆಶ್ಚರ್ಯಕ್ಕೆ ಕಾರಣವಾಗಿದೆ. ಯಾಕೆಂದ್ರೆ ಸಾಮಾನ್ಯವಾಗಿ ಚಳಿಗಾಲದಲ್ಲಿ ನೀರ್ಗಲ್ಲು ಸ್ಪೋಟವಾಗುವುದು ಅಸಾಧ್ಯವೇ ಎಂಬುದು ತಜ್ಞರ ಅಭಿಪ್ರಾಯ.
ಮತ್ತೆ ಎಡವಟ್ಟು ಮಾಡಿಕೊಂಡ ಕೆಪಿಎಸ್ ಸಿ : ವಿದ್ಯಾರ್ಥಿಗಳಿಗೆ ಸಂಕಷ್ಟ
ಹೌದು ಚಳಿಗಾಲದಲ್ಲಿ ನೀರ್ಗಲ್ಲು ಕರಗಿ ಸರೋವರ ಸ್ಪೋಟಿಸಿರುವುದು ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಹಿಮಾಲಯ ಪರ್ವತಗಳಲ್ಲಿ ಚೀನಾ ನಡೆಸುತ್ತಿರುವ ವಿವಿಧ ಪ್ರಯೋಗಗಳು ನೀರ್ಗಲ್ಲು ಸ್ಪೋಟಕ್ಕೆ ಕಾರಣವಿರಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಇದೀಗ ಸ್ಫೋಟದ ಹಿಂದಿನ ಕಾರಣ ತಿಳಿಯಲು ಇಸ್ರೋ ನೆರವನ್ನು ಪಡೆಯಲು ಮುಂದಾಗಿದ್ದಾರೆ. ಈ ಘಟನೆ ಸಂಪೂರ್ಣ ತನಿಖೆ ನಡೆದ ನಂತರವೇ ನಿಜವಾದ ಅಸಲಿಯತ್ತು ಬಯಲಾಗಬೇಕಾಗಿದೆ.
ಹಿಮಸ್ಫೋಟದ ಪರಿಣಾಮಗಳು
ಇನ್ನೂ ಉತ್ತರಕಾಂಡದಲ್ಲಿ ಹಿಮಕುಸಿತದ ಪರಿಸ್ಥಿತಿ ವಿಚಾರವಾಗಿ ಮಾತನಾಡೋದಾದ್ರೆ ಈಗಾಗಲೇ 30ಕ್ಕೂ ಅಧಿಕ ಮಂದಿ ಈ ಘಟನೆಯಲ್ಲಿ ಬಲಿಯಾಗಿದ್ದಾರೆ. 176 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ತಪೋವನ್ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಉತ್ತರಾಖಂಡ ಹಿಮನದಿ ದುರಂತದಿಂದ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿದ್ದು, ಇನ್ನೂ ಎರಡು ಮೃತದೇಹಗಳು ಹೊರತೆಗೆಯಲಾಗಿದ್ದು, ಚಮೋಲಿ ಜಿಲ್ಲೆಯ ತಪೋವನ್ ವಿದ್ಯುತ್ ಯೋಜನೆಯ ಸುರಂಗದೊಳಗೆ ಸಿಲುಕಿರುವ ಸುಮಾರು 30 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ. ಇತ್ತೀಚಿನ ಮಾಹಿತಿಪ್ರಕಾರ, ಭಾನುವಾರದ ಅನಾಹುತದ ನಂತರ ಸುಮಾರು 176 ಮಂದಿ ನಾಪತ್ತೆಯಾಗಿದ್ದಾರೆ.

ಯಾವ ಯಾವ ದೇಶದಲ್ಲಿ ಎಷ್ಟು ಮಂದಿ ಭಾರತೀಯರಿದ್ದಾರೆ ಗೊತ್ತಾ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








