ಉತ್ತರಕಾಂಡ್ ನಲ್ಲಿ ಹಿಮಕುಸಿತ : ನಾಪತ್ತೆಯಾದವರ ಸಂಬಂಧಿಕರ ಪ್ರತಿಭಟನೆ
ಉತ್ತರಖಂಡ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಹಿಮಸ್ಪೋಟದಲ್ಲಿ ಈಗಾಗಲೇ 32 ಜನಬಲಿಯಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. 170 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ರಕ್ಷಾಣ ಕಾರ್ಯಾಚರಣೆ ಜಾರಿಯಲ್ಲಿದೆ. ಇದೀಗ ನಾಪತ್ತೆಯಾಗಿರುವ ಕಾರ್ಮಿಕರ ಕುಟುಂಬದ ಸದಸ್ಯರು ಋಷಿಗಂಗಾ ಜಲ ವಿದ್ಯುತ್ ಶಕ್ತಿ ಯೋಜನೆಯ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಉತ್ತರ ಕೊರಿಯಾದಲ್ಲಿ ಹೊಸ ಕಾನೂನು – ಮಕ್ಕಳನ್ನು ಸರಿಯಾಗಿ ಬೆಳೆಸಲು ವಿಫಲರಾದ ಪೋಷಕರಿಗೆ ದಂಡ !
ರಕ್ಷಣಾ ಕಾರ್ಯಾಚರಣೆ ಸೂಕ್ತ ರೀತಿಯಲ್ಲಿ, ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದು, ಕೇವಲ ಸಂಪರ್ಕ ಮರುಸ್ಥಾಪನೆಗಾಗಿಯಷ್ಟೇ ಆತುರ ತೋರಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿಮ ಮಹತ್ವ ನೀಡಲಾಗುತ್ತಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ. ನಾಪತ್ತೆಯಾಗಿರುವ 40 ಕಾರ್ಮಿಕರ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಘಟನೆಯಲ್ಲಿ ಈಗಾಗಲೇ ಮೃತಪಟ್ಟವರ ಸಂಖ್ಯೆ 32 ಕ್ಕೆ ಏರಿಕೆಯಾಗಿದ್ದು, 176 ಕ್ಕೂ ಅಧಿಕ ಮಂದಿ ಇನ್ನೂವರೆಗೂ ನಾಪತ್ತೆಯಾಗಿದ್ದಾರೆ.
‘ಪುರುಷೋತ್ತಮ’ ದಲ್ಲಿ ನಾಯಕನಾಗಿ ಮಿಂಚಲಿದ್ದಾರೆ ಜಿಮ್ ರವಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel