ಉತ್ತರಖಂಡದಲ್ಲಿ ಹಿಮಕುಸಿತ : ಸಾವಿನ ಸಂಖ್ಯೆ 67ಕ್ಕೆ ಏರಿಕೆ , 137 ಮಂದಿ ನಾಪತ್ತೆ
ಉತ್ತರಖಂಡ : ಉತ್ತರಖಂಡದ ಚಮೋಲಿಯಲ್ಲಿ ಹಿಮಸ್ಫೋಟ ಪ್ರಕರಣದಲ್ಲಿ ಬಲಿಯಾದವರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ದರಂತದಲ್ಲಿ ಹಲವರು ಜೀವ ಕಳೆದುಕೊಂಡಿದ್ದಾರೆ. 15 ದಿನಗಳಿಂದ ತಪೋವನ ಸುರಂಗ, ರೇನಿ ಗ್ರಾಮ ಸೇರಿ ಚಮೋಲಿಯಲ್ಲಿ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಲೇ ಇದ್ದು, ಇಂದು ಮತ್ತೆ ಐವರ ಮೃತದೇಹ ಪತ್ತೆಯಾಗಿವೆ.
ಮೋದಿ ಅವರ ದುರಹಂಕಾರದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ : ಪ್ರಿಯಾಂಕಾ ವಾದ್ರಾ..!
ಹಿಮ ಪ್ರವಾಹದ ಸಮಯದಲ್ಲಿ ರಿಷಿಗಂಗಾ ನದಿಯ ಮಾರ್ಗ ಮುಚ್ಚಲ್ಪಟ್ಟಿದ್ದು, ಬೃಹತ್ ಮಟ್ಟದ ಕಲ್ಲು, ಮಣ್ಣು ರಿಷಿಗಂಗಾ ನದಿಗೆ ತಡೆಯೊಡ್ಡಿವೆ. ಈ ಸರೋವರದ ಬಳಿ ಕ್ವಿಕ್ ಡಿಪ್ಲೋಯಬಲ್ ಆಯಂಟೆನಾವನ್ನ ಎಸ್ ಡಿಆರ್ಎಫ್ ಅಳವಡಿಸಿದೆ. ಶನಿವಾರ ಸಂಜೆ ಮೂರು ಶವಗಳು ಪತ್ತೆಯಾಗಿತ್ತು. ರಾತ್ರಿ ವೇಳೆಗೆ ಇನ್ನೂ ಎರಡು ಶವಗಳು ಸಿಕ್ಕಿವೆ. ಈ ಮೂಲಕ ಮೃತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಇನ್ನೂವರೆಗೂ 137 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ತೈಲ ಬೆಲೆಯೇರಿಕೆ : ಜನಾಕ್ರೋಶ, ದರ ಇಳಿಕೆ ಹೊರತು ಬೇರೆ ಉತ್ತರವಿಲ್ಲ ಎಂದ ನಿರ್ಮಲಾ ಸೀತಾರಾಮನ್
ಆಚಾರ್ಯ ಚಿತ್ರದಲ್ಲಿ ಚಿರಂಜೀವಿಗೆ ಸವಾಲ್ ಹಾಕಲಿರುವ ಬೆಂಗಾಳಿ ಖ್ಯಾತ ನಟ