ಉತ್ತರಾಖಂಡ ಹಿಮಪ್ರವಾಹ : ನಾಪತ್ತೆಯಾದ 130 ಮಂದಿ ಇನ್ನೂ ಸಿಕ್ಕಿಲ್ಲ..!
ನವದೆಹಲಿ : ಉತ್ತರಾಖಂಡದ ಋಷಿಗಂಗಾ ಹಾಗೂ ದೌಳಿಗಂಗಾದಲ್ಲಿ ಕಳೆದ ತಿಂಗಳು ( ಫೆ.7) ಸಂಭವಿಸಿದ ಭೀಕರ ಹಿಮಸ್ಫೋಟದಲ್ಲಿ 74 ಜನರು ಮೃತಪಟ್ಟಿದ್ದರು. ಇನ್ನೂ ಅನೇಕರು ನಾಪತ್ತೆಯಾಗಿದ್ದರು. ಈ ಪೈಕಿ ಎಷ್ಟೇ ಹುಡುಕಾಟ ನಡೆಸಿದ್ರೂ ಈವರೆಗೂ ನಾಪತ್ತೆಯಾಗಿರುವ 130 ಕ್ಕೂ ಅಧಿಕ ಮಂದಿ ಸಿಕ್ಕಿಲ್ಲ ಎಂದು ಕೇಂದ್ರದ ಸಹಾಯಕ ಸಚಿವ ನಿತ್ಯಾನಂದ ರಾಯ್ ಲೋಕಸಭೆಗೆ ತಿಳಿಸಿದ್ದಾರೆ.
ಹಿಮಸ್ಫೋಟದ ಕುರಿತು ಅಧ್ಯಯನ ನಡೆಸಲು ಹಾಗೂ ಇಂತಹ ದುರ್ಘಟನೆಗಳನ್ನು ತಡೆಯಲು ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಪರಿಹಾರ ಸೂಚಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಂಸ್ಥೆಗಳ, ಸಂಘಟನೆಗಳ ತಜ್ಞರ ಜಂಟಿ ಅಧ್ಯಯನ ತಂಡವೊಂದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರೂಪಿಸಿದೆ ಎಂದು ಉತ್ತರಾಖಂಡ ಸರಕಾರ ತಿಳಿಸಿದೆ.
ಇನ್ನೂ ಉತ್ತರಾಖಂಡ ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ ಈವರೆಗೂ 74 ಮೃತದೇಹಗಳು ಪತ್ತೆಯಾಗಿದ್ದು, 130 ಮಂದಿ ನಾಪತ್ತೆಯಾಗಿದ್ದಾರೆ. ಅವರ್ಯಾರು ಇನ್ನೂವರೆಗೂ ಪತ್ತೆಯಾಗಿಲ್ಲ ಎನ್ನಲಾಗಿದೆ.
ಅಬ್ದುಲ್ ಕಲಾಂ ಅವರನ್ನ ‘ಜಿಹಾದಿ’ ಎಂದ ಅರ್ಚಕ!
ನೋಡ್ರಪ್ಪಾ ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ : ಡಿಕೆಶಿ
‘ಪ್ರಶಾಂತ್ ಸಂಬರಗಿ ದಡ್ಡ, ಎಲ್ಲರನ್ನೂ ವೀಕ್ ಅಂತ ನಂಬಿಸುವುದೇ ಅವರ ಗೇಮ್ ಪ್ಲಾನ್’..!