ಉತ್ತರ ಪ್ರದೇಶ : ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆ ಮೇಲೆ ನಾಲ್ವರು ವೈದ್ಯರಿಂದ ಸಾಮೂಹಿಕ ಅತ್ಯಾಚಾರ

1 min read

ಉತ್ತರ ಪ್ರದೇಶ : ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆ ಮೇಲೆ ನಾಲ್ವರು ವೈದ್ಯರಿಂದ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶ : ಅಪರಾಧಗಳ ಆಗರ ಉತ್ತರ ಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಮದಿದೆ. ಪ್ರಯಾಗ್‌ರಾಜ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಪರೇಷನ್ ಥಿಯೇಟರ್‌ ನಲ್ಲಿ  ಮಹಿಳಾ ರೋಗಿಯೊಬ್ಬರ ಮೇಲೆ ನಾಲ್ವರು ವೈದ್ಯರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಸಂತ್ರಸ್ತೆಯ ಸಹೋದರ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯು ಉದರ ಸಂಬಂಧಿ ರೋಗದಿಂದ ಬಳಲುತ್ತಿದ್ದ ಮಹಿಳಾ ರೋಗಿಯು ಪ್ರಯಾಗ್‌ರಾಜ್‌ನ ಎಂಎಲ್‌ಎನ್ ವೈದ್ಯಕೀಯ ಕಾಲೇಜಿನ ಭಾಗವಾಗಿರುವ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಯಲ್ಲಿ ಶನಿವಾರ ದಾಖಲಾಗಿದ್ದರು. ಅದೇ ದಿನ ರಾತ್ರಿ ಮಹಿಳೆಗೆ ದೊಡ್ಡ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಗಿತ್ತು. ಮೂರು ಗಂಟೆಯ ಶಸ್ತ್ರಚಿಕಿತ್ಸೆಯ ಬಳಿಕ ಶಸ್ತ್ರಚಿಕಿತ್ಸಾ ಕೊಠಡಿಯಿಂದ  ಮಹಿಳೆಯನ್ನು ಹೊರಗೆ ತರಲಾಯಿತು.

ತೀವ್ರ ನೋವಿನಿಂದ ಮಾತನಾಡಲು ಆಗದ ಹಿನ್ನೆಲೆ ಮಹಿಳೆ ಸಹೋದರನಿಗೆ ಕಾಗದದ ತುಂಡಿನ ಮೇಲೆ ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ನನ್ನ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಬರೆಯುವ ಮೂಲಕ ತಿಳಿಸಿದ್ದಾಳೆ.

ಆದ್ರೆ ವೈದ್ಯರು ಅತ್ಯಾಚಾರ ಆರೋಪವನ್ನು ಅಲ್ಲಗಳೆದಿದ್ದಾರೆ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಎಸ್‌.ಪಿ ಸಿಂಗ್ ಅವರು ‘ಒಟಿಯಲ್ಲಿ ಅಂದು ಇಬ್ಬರು ಮಹಿಳಾ ವೈದ್ಯರೂ ಇದ್ದರು. ನಮ್ಮ ಕಾಲೇಜಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿಯ ಆರೋಪ ಮಾಡಲಾಗಿದೆ’ ಎಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಹಿರಿಯ ವೈದ್ಯರು ಸೇರಿದಂತೆ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ನಡೆದಿದೆ.

ವಿಶ್ವದ 10 ಅಪಾಯಕಾರಿ ದೇಶಗಳು – 10 MOST Dangerous countries –  ಇಲ್ಲಿ ಪ್ರವಾಸಿಗರ ಲೈಫ್ ಗೆ ಗ್ಯಾರಂಟಿ ಇಲ್ಲ…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd