ಯುಪಿಯಲ್ಲಿ ನಾಯಿಗಳಿಗೂ ಸೇಫ್ಟಿ ಇಲ್ವಾ..! ನಾಯಿಯ ಖಾಸಗಿ ಅಂಗ ಕತ್ತರಿಸಿದ ಪಾಪಿ..!
ಉತ್ತರಪ್ರದೇಶ : ಅಪರಾಧಗಳ ಆಗರ ಉತ್ತರಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಿಕೆಗೆ ಬಂದಿದೆ. ವ್ಯಕ್ತಿಯೊಬ್ಬ ಪಕ್ಕದ ಮನೆಯ ನಾಯಿಯ ಖಾಸಗಿ ಅಂಗವನ್ನೇ ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಕಾನ್ಪುರ್ ದೇಹತ್ ಪ್ರದೇಶದಲ್ಲಿ ಇಂತಹ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ನಾಯಿ ಸುರೇಶ್ ಸಿಂಗ್ ಎಂಬವರಿಗೆ ಸೇರಿದ್ದಾಗಿದೆ. ಇವರು ತನ್ನ ನೆರೆಮನೆಯಾತ ಮತ್ತು ಆತನ ಹೆಂಡತಿ ಸೇರಿ ಹರಿತವಾದ ಆಯುಧದಿಂದ ನಾಯಿಯ ಜನನಾಂಗವನ್ನು ಕತ್ತರಿಸಿದ್ದಾರೆ ಎಂದು ದೂರಿದ್ದಾರೆ. ಘಟನೆಯಿಂದಾಗಿ ಗಂಭೀರ ಗಾಯಗೊಂಡ ಶ್ವಾನವನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ಇತ್ತ ಘಟನೆಯ ನಂತರ ನೋವಿನಿಂದ ನರಳಾಡುತ್ತಾ ಕೂಗಾಡುತ್ತಿದ್ದ ನಾಯಿಯ ಕೂಗು ಕೇಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದ ಮಾಲೀಕರು ಅದನ್ನ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ದೂರನ್ನ ಆಧರಿಸಿ ಪೊಲೀಸರು ಆರೊಪಿಗಳ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದೇಶದಲ್ಲಿ ಕೊರೊನಾ ಮರಣಮೃದಂಗ – ಒಂದೇ ದಿನ 1,027 ಮಂದಿ ಸಾವು – 2 ಲಕ್ಷದತ್ತ ಕೊರೊನಾ..!
ಮೋದಿ ನಾಯಕತ್ವದಲ್ಲಿ ಪಾಕ್ ಗೆ ತಕ್ಕ ಪಾಠ : ಅಮೆರಿಕ ಬೇಹುಗಾರಿಕೆ ವರದಿ
BIGGBOSS 8 : ದಿವ್ಯಾ – ಅರವಿಂದ್ ಲವ್ ಸ್ಟೋರಿಗೆ ಬಿಗ್ ಬಾಸ್ ಟಾಸ್ಕ್ ಗಳೇ ಸೇತುವೆ..!