BIGGBOSS 8 : ದಿವ್ಯಾ – ಅರವಿಂದ್ ಲವ್ ಸ್ಟೋರಿಗೆ ಬಿಗ್ ಬಾಸ್ ಟಾಸ್ಕ್ ಗಳೇ ಸೇತುವೆ..!
ಬೆಂಗಳೂರು : ಬಿಗ್ ಬಾಸ್ ನಲ್ಲಿ ಸಾಕಷ್ಟು ವಿಭಿನ್ನ ಹಾಗೂ ಇಂಟರೆಸ್ಟಿಂಗ್ ಟಾಸ್ಕ್ ಗಳನ್ನ ಕೊಡಲಾಗ್ತಿದೆ. ಅದ್ರಲ್ಲೂ ಕೆಲವೊಮ್ಮೆ ಬಿಗ್ ಬಾಸ್ ಕೊಡೋ ಟಾಸ್ಕ್ ಗಳು ಮನೆಯ ಕ್ಯೂಟ್ ಕಪಲ್ ಅಂತಲೇ ಗಾಸಿಪ್ ಆಗಿರುವ ದಿವ್ಯಾ – ಅರವಿಂದ್ ರನ್ನ ಮತ್ತಷ್ಟು ಸನಿಹಕ್ಕೆ ತರುವಂತೆಯೇ ಇವೆ. ಜೋಡಿ ಟಾಸ್ಕ್ , ಒಲವಿನ ಉಡುಗೊರೆ, ಚಿಕನ್ ಟಾಸ್ಕ್ ಇದೀಗ ಹಾಸ್ಟೆಲ್ ಟಾಸ್ಕ್..
ಬಿಗ್ ಬಾಸ್ ಟಾಸ್ಕ್ ಗಳನ್ನ ಕೊಡುತ್ತಾ ಹೋದಂತೆಲ್ಲಾ ಇವರಿಬ್ಬರು ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಹಾಸ್ಟೆಲ್ ಟಾಸ್ಕ್ ಸಿಕ್ಕಾಪಟ್ಟೆ ಮಜರಂಜಿಸುತ್ತಿದೆ. ಎಲ್ಲರ ಒಂದು ಡಿಫರೆಂಟ್ ಆಟಿಟ್ಯೂಡ್ ನೋಡಲಿಕ್ಕೆ ಸಿಗ್ತಿದೆ. ಆದ್ರೆ ಈ ಟಾಸ್ಕ್ ನಲ್ಲೂ ತುಂಬಾನೆ ಹೈಲೈಟ್ ಆಗ್ತಿರೋದು ದಿವ್ಯಾ – ಅರವಿಂದ್ ಜೋಡಿ. ಹುಡುಗರ ಹಾಸ್ಟೆಲ್, ಹುಡುಗಿಯರ ಹಾಸ್ಟೆಲ್ ಮಾಡಿ ಅದಕ್ಕೆ ವಾರ್ಡನ್ ನಿಧಿರನ್ನ ನೇಮಕ ಮಾಡಲಾಗಿತ್ತು. ಹಾಸ್ಟೆಲ್ನಲ್ಲಿ ನಡೆಯುವಂತೆ ಹುಡುಗರು, ಹುಡುಗಿಯರು ನಡೆದುಕೊಳ್ಳಬೇಕಾಗಿತ್ತು. ಆಗ ಅರವಿಂದ್, ದಿವ್ಯಾ ಇನ್ನಷ್ಟು ಹತ್ತಿರವಾಗಿದ್ದಾರೆ.
ಈ ವೇಳೆ ನಾವು ಇವಾಗ ತಾನೇ ಭೇಟಿಯಾಗಿದ್ದು, ನೀವು ಎಷ್ಟೊಂದು ಮಾತನಾಡುತ್ತಿದ್ದೀರಾ ಎಂದು ದಿವ್ಯಾ ಹೇಳಿದ್ದಾರೆ. ಮತ್ತೇ ನೀವು ಸಿಗದೆ ಹೋದರೆ ಎಂದು ನಾನು ಮಾತನಾಡುತ್ತಿದ್ದೇನೆ ಎಂದು ಅರವಿಂದ್ ಹೇಳಿದ್ದಾರೆ. ಹಾಗಾದ್ರೆ ನಿಮಗೆ ತುಂಬಾ ಧೈರ್ಯ ಎಂದು ದಿವ್ಯಾ ಹೇಳುವಾಗ ಅರವಿಂದ್ ಇಲ್ಲಾ ನನಗೆ ಭಯಾ ಆಗುತ್ತಿದೆ. ನೀನು ಅಂದ್ರೆ ನನಗೆ ಇಷ್ಟ ಎಂದು ಅರವಿಂದ್ ಹೇಳಿದ್ದಾರೆ. ಈ ವೇಳೆ ದಿವ್ಯಾ ಮಾತ್ರ ಜೋರಾಗಿ ನಕ್ಕಿದ್ದಾರೆ. ಆದ್ರೆ ಇವರು ಟಾಸ್ಕ್ ನಲ್ಲಿಯೇ ಮಾತನಾಡಿಕೊಂಡಿದ್ರು, ಇವರ ಮಾತುಗಳು ಮನಸಿನಿಂದ ಬಂದಂತೆ ಅನಿಸಿದೆ.
ಈ ವೇಳೆ ಅರವಿಂದ್ ದಿವ್ಯಾಳ ಕೈ ಹಿಡಿದುಕೊಳ್ಳಲಾ ಎಂದು ಕೇಳಿದ್ದಾರೆ. ಅದಕ್ಕೆ ದಿವ್ಯಾ ನಾನು ನಮ್ಮ ಅಪ್ಪಾಜಿಯನ್ನು ಕೇಳಬೇಕು ಎಂದು ಹೇಳಿದ್ದಾರೆ. ಆಗ ದಿವ್ಯಾಳ ಕೈ ಹಿಡಿದ ಅರವಿಂದ್ ನಿಮ್ಮ ಕೈ ಕ್ಯೂಟ್ ಆಗಿದೆ ಎಂದು ಹೇಳಿದ್ದಾರೆ. ದಿವ್ಯಾ ನಗುತ್ತಾ ನಾನು ಹೋಗುತ್ತೇನೆ ಎಂದಿದ್ದಾರೆ. ಆಗ ಇಲ್ಲಾ ಬೇಡಾ ನೀನು ಹೋಗುವುದು ಎಂದು ಅರವಿಂದ್ ಪ್ರೀತಿಯಿಂದ ಹೇಳಿದ್ದಾರೆ. ಇಲ್ಲಾ ನಮ್ಮ ಅಪ್ಪಾಜಿ ಬರುತ್ತಾರೆ ಎಂದು ದಿವ್ಯಾ ಹೇಳಿದ್ದಾರೆ. ಅದಕ್ಕೆ ನಿಮ್ಮ ಅಪ್ಪಾಜಿ ಬಂದ್ರೆ ನಾವು ಇಲ್ಲಿಂದ ಓಡಿ ಹೋಗೋಣ ಎಂದು ಹೇಳಿದ್ದಾರೆ.