ಕೇವಲ ಜೀನ್ಸ್ – ಟೀ ಶರ್ಟ್ ಧರಿಸಿದ್ದಕ್ಕೆ ಹುಡುಗಿಯನ್ನು ಕೊಂದ ಪಾಪಿಗಳು..!
ಅಪರಾಧಗಳ ಆಗರ ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲಿನ , ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಲೇ ಇರುವುದು ಅಲ್ಲಿನ ಕಾನೂನು ವ್ಯವಸ್ಥೆಯ ದುರ್ಬಲತೆಯನ್ನ ತೋರಿಸುತ್ತೆ.. ಆದ್ರೆ ತನ್ನಿಷ್ಟದಂತೆ ಬಟ್ಟೆ ಧರಿಸಿದರೂ ಕೂಡ ಇಲ್ಲಿ ಯುವತಿಯರನ್ನ ಕೊಲೆ ಮಾಡುವಂತಹ ದುಸ್ಥಿತಿಗೆ ಈ ರಾಜ್ಯ ತಲುಪಿದೆ.. ಹೌದು ‘ಯೋಗಿ ರಾಜ್ಯ’ ಉತ್ತರಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.. ಜೀನ್ಸ್, ಟಿ- ಶರ್ಟ್ ಧರಿಸಿದಳೆಂಬ ಒಂದೇ ಒಂದು ಕಾರಣಕ್ಕೆ ಕಿಡಿಗೇಡಿಗಳು 16 ವರ್ಷದ ಹುಡುಗಿಯೊಬ್ಬಳನ್ನು ಕೊಲೆಗೈದಿದ್ದಾರೆ..
ಮೃತಳನ್ನು ನೇಹಾ ಎಂದು ಗುರುತಿಸಲಾಗಿದೆ. ದೇವಾರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈಕೆ ವಿದ್ಯಾಭ್ಯಾಸ ಹಿನ್ನೆಲೆಯಲ್ಲಿ ಲೂಧಿಯಾನದಲ್ಲಿ ನೆಲೆಸಿದ್ದಳು. ಹೀಗಾಗಿ ಅಲ್ಲಿ ಎಲ್ಲರಂತೆ ನೇಹಾ ಕೂಡ ಜೀನ್ಸ್, ಟೀ ಶರ್ಟ್ ಧರಿಸುತ್ತಿದ್ದಳು. ಲೂಧಿಯಾನದಲ್ಲಿ ಧರಿಸಿ ಅಭ್ಯಾಸವಿದ್ದ ನೇಹಾ ತಮ್ಮ ಮನೆಗೆ ಬಂದ ಸಂದರ್ಭದಲ್ಲಿಯೂ ಜೀನ್ಸ್, ಟೀ ಶರ್ಟ್ ಧರಿಸಿದ್ದಳು. ಈ ವೇಳೆ ಮನೆಯಲ್ಲಿ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳಬೇಡ ಎಂದು ನೇಹಾ ಚಿಕ್ಕಪ್ಪ ಹಾಗೂ ಅಜ್ಜ ವಾರ್ನ್ ಮಾಡಿದ್ದಾರೆ. ಈ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ನಡೆದಿದೆ.
14 ವರ್ಷದ ಬಾಲಕಿಯ ಮೇಲೆ 6 ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ಜಗಳವಾದ ವೇಳೆ ಆಕೆಯನ್ನ ಆಕೆಯ ಚಿಕ್ಕಪ್ಪ – ತಾತ ಮಾರಣಾಂತಿಕವಾಗಿ ಥಳಿಸಿದ್ದಾರೆ. ಈ ವೇಳೆ ನೇಹಾ ಮೃತಪಟ್ಟಿದ್ದಾಳೆ.. ಗಾಬರಿಗೊಂಡ ಆರೋಪಿಗಳು ಆಕೆಯ ಶವವನ್ನ ಸೇತುವೆ ಕೆಳಗೆ ಬಿಸಾಡಲು ಪ್ರಯತ್ನಿಸಿದ್ದಾರೆ.. ನೇಹಾ ಶವ ಕಂಡ ಸ್ಥಳೀಯರು ತಕ್ಷಣವೇ ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ..
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಇತ್ತ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಮಗಳನ್ನು ಚಿಕ್ಕಪ್ಪ ಹಾಗೂ ಆಕೆಯ ಅಜ್ಜ ಸೇರಿ ಕೊಲೆ ಮಾಡಿದ್ದಾರೆ. ಬಳಿಕ ಅವರೇ ಮಗಳ ಶವವನ್ನು ಇಲ್ಲಿ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ. ತಾಯಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ಮೃತಳ ಚಿಕ್ಕಪ್ಪ ಹಾಗೂ ತಾತನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮಹಿಳೆಗೆ ಆ್ಯಸಿಡ್ ಕುಡಿಸಿದ ಪಾಪಿಗಳು – ಪತಿಯ ಮನೆಯವರ ಬಂಧನಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ..!