ಪತಿಗೆ ಕೈಕೊಟ್ಟು , ಆತನ ತಂದೆಯನ್ನೇ ಮದುವೆಯಾದ ಯುವತಿ
ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ.. ಮಹಿಳೆಯೊಬ್ಬಳು ತನ್ನ ಗಂಡನನನ್ನ ಬಿಟ್ಟು ಆತನ ತಂದೆಯನ್ನೇ (ಮಾವ) ಮದುವೆಯಾಗಿದ್ದಾಳೆ..
ಹೌದು.. ಯುವಕನೊಬ್ಬ 2016ರಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದನಂತೆ. ಆಗ ಇಬ್ಬರೂ ಅಪ್ರಾಪ್ತರಾಗಿದ್ದರು.. ಆದ್ರೆ 6 ತಿಂಗಳ ಕಾಲ ಸಂಸಾರ ನಡೆಸಿದ್ದರು. ಅದಾದ ಮೇಲೆ ಗಂಡ ಮದ್ಯಪಾನ ಮಾಡುತ್ತಾನೆ ಎನ್ನುವ ಕಾರಣ ಕೊಟ್ಟು ಯುವತಿ ಆತನಿಂದ ದೂರವಾಗಿದ್ದಳು ಎನ್ನಲಾಗಿದೆ. ಆತ ಅದೆಷ್ಟೇ ಬೇಡಿಕೊಂಡಿದ್ದರೂ ಅವಳು ಸಂಸಾರ ಮುಂದುವರಿಸಲು ಒಪ್ಪಿರಲಿಲ್ಲ ಎಂದು ಯುವಕ ಹೇಳಿಕೊಮಡಿದ್ದಾನೆ.
ಆದ್ರೆ ಗಂಡನಿಗೆ ಕೈಕೊಟ್ಟಿದ್ದ ಯುವತಿ ಈಗ ಆತನ ಅಪ್ಪ ಅಂದ್ರೆ ತಂದೆ ಸಮಾನರಾದ ತನ್ನ ಮಾವನನ್ನೇ (48) ಮದುವೆಯಾಗಿ ಜೀವನ ನಡೆಸುತ್ತಿದ್ದಾಳೆ ಎನ್ನಲಾಗಿದೆ.. ಕೆಲ ತಿಂಗಳ ಹಿಂದೆ ಯುವಕ ಮನೆ ಬಿಟ್ಟು ಹೋಗಿದ್ದು, ಕೆಲ ದಿನಗಳವರೆಗೂ ಆತನಿಗೆ ತಂದೆ ಹಣ ಕೊಡುತ್ತಿದ್ದ ಎನ್ನಲಾಗಿದೆ.. ಸ್ವಲ್ಪ ಸಮಯದ ನಂತರ ಹಣ ಕಳುಹಿಸುವುದನ್ನ ನಿಲ್ಲಿಸಿದ್ದಾನೆ ಎನ್ನಲಾಗಿದೆ..
ಇದರಿಂದಾಗಿ ಬೇಸರಗೊಂಡ ಯುವಕ ಅಪ್ಪನ ಬಗ್ಗೆ ಮಾಹಿತಿ ಕೋರಿ ಆರ್ಟಿಐ ಅರ್ಜಿ ಸಲ್ಲಿಸಿದ್ದಾನೆ. ಅದರಲ್ಲಿ ತಂದೆ 2ನೇ ಮದುವೆಯಾಗಿರುವುದು ಗೊತ್ತಾಗಿದೆ. ಆದ್ರೆ ತಂದೆಯ 2ನೇ ಹೆಂಡತಿಯ ಹೆಸರು ನೋಡಿ ಯುವಕ ಆಘಾತಕ್ಕೆ ಒಳಗಾಗಿದ್ದಾನೆ. ತನಗೆ ಕೈ ಕೊಟ್ಟಿದ್ದ ಯುವತಿಯನ್ನೇ ಅಪ್ಪ ಮದುವೆಯಾಗಿರುವುದನ್ನ ಕಂಡು ದಿಗ್ಭ್ರಾಂತನಾಗಿದ್ದಾನೆ. ಬಳಿಕ ಯುವಕ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಬಳಿಕ ಪೊಲೀಸರು ಪ್ರಕರಣ ಸಂಬಂಧಿತ ಎಲ್ಲರನ್ನೂ ಕರೆಸಿ ವಿಚಾರಣೆ ನಡೆಸಿದಾಗ ಯುವತಿ ನ=ತಾನು ಮೊದಲನೇ ವಿವಾಹವಾಗಿದ್ದಾಗ ಅಪ್ರಾಪ್ತೆಯಾಗಿದ್ದು, ಈಗ ನಾನು 2ನೇ ಪತಿ ಜೊತೆ ಜೀವನ ನಡೆಸುತ್ತಿದ್ದೇನೆ.. ಮತ್ತೆ ಮೊದಲ ಪತಿಯ ಜೊತೆ ಹೋಗುವುದಿಲ್ಲ ಎಂದಿದ್ದಾಳೆ..
ಫಿಲಿಫೈನ್ಸ್ – ಸೇನಾ ವಿಮಾನ ಅಪಘಾತದಲ್ಲಿ 17 ಯೋಧರು ಸಾವು