ಉತ್ತರಪ್ರದೇಶ: ಉತ್ತರಪ್ರದೇಶದಲ್ಲಿ ದಿನೇ ದಿನೇ ಅತ್ಯಾಚಾರ , ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ಇತ್ತೇಚೆಗಷ್ಟೇ ಹತ್ರಾಸ್ ನಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೀಡಾಗಿದ್ದ 19 ವರ್ಷದ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು..
ಈ ಪ್ರಕರಣಕ್ಕೆ ಇಡೀ ದೇಶಾದ್ಯಂತ ಆಕ್ರೋಶ ಬುಗಿಲೆದ್ದಿರುವ ಬೆನ್ನಲ್ಲೇ ಬಲರಾಂಪುರದಲ್ಲಿ ಮತ್ತೊಂದು ಇಂತಹದ್ದೇ ಹೀನ ಕೃತ್ಯ ವರದಿಯಾಗಿದೆ.
22 ವರ್ಷದ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವಿಗೀಡಾಗಿದ್ದಾಳೆ.
ನೀವು ಕಾಫಿ ಪ್ರಿಯರಾಗಿದ್ದರೆ ಈ ಮಾಹಿತಿಯನ್ನೊಮ್ಮೆ ನೋಡಿ
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮನೆಗೆ ವಾಪಾಸ್ಸಾಗ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಿದ್ದಾರೆ.
ಇನ್ನೂ ಸಮೀಪದ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಯುವತಿ ಸಾವಿಗೀಡಾಗಿದ್ದಾಳೆ.
ಆರೋಪಿಗಳಾದ ಶಾಹಿದ್ ಮತ್ತು ಸಾಹಿಲ್ ನನ್ನ ಬಂಧಿಸಲಾಗಿದೆ..