ಹಾವೇರಿ: ರಾಜ್ಯ (Congress) ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಗೃಹಲಕ್ಷ್ಮಿ ಯೋಜನೆಯ ಭರವಸೆ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬರುತ್ತಿದ್ದಂತೆ ಗೃಹಲಕ್ಷ್ಮೀ ಯೋಜನೆ (Gruhalakshmi Scheme) ಜಾರಿಗೆ ತಂದಿತ್ತು. ಆದರೆ, ಈ ಯೋಜನೆಯ ಹಣವನ್ನು ಹಲವರು ಸದುಪಯೋಗ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬರುತ್ತಲೇ ಇವೆ. ಸದ್ಯ ಅತ್ತೆಯೊಬ್ಬರು ಸೊಸೆಗೆ ಅಂಗಡಿಗೆಯನ್ನೇ ಹಾಕಿಕೊಟ್ಟಿದ್ದಾರೆ.
ಗೃಹಲಕ್ಷ್ಮಿ ಹಣದಿಂದ ಅತ್ತೆಯೊಬ್ಬರು ಸೊಸೆಗೆ ಪ್ಯಾನ್ಸಿ ಸ್ಟೋರ್ ಹಾಕಿ ಕೊಟ್ಟಿದ್ದಾರೆ. ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಗೃಹಲಕ್ಷ್ಮೀ ಹಣದಿಂದ ಪ್ಯಾನ್ಸಿ ಸ್ಟೋರ್ ನ್ನು ಸೊಸೆ ಅತ್ತೆಯ ಸಹಾಯದಿಂದ ಹಾಕಿದ್ದಾರೆ. ಸೊಸೆ ಹೊರಗೆ ಕೆಲಸಕ್ಕೆ ಹೋಗಬಾರದು ಎಂದು ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ನ್ನು ಅತ್ತೆ ಹಾಕಿಕೊಟ್ಟಿದ್ದಾರೆ. ಇದಕ್ಕೆ ಗೃಹ ಲಕ್ಷ್ಮೀಯ ಹಣ ಬಳಕೆ ಮಾಡಿಕೊಂಡಿದ್ದಾರೆ.
10 ಕಂತಿನ 20,000 ರೂಪಾಯಿ ಹಣ ಕೂಡಿಟ್ಟು ಸೊಸೆ ಕುಮಾರಿ ಶಿವನಗೌಡ ಪಾಟೀಲ್ಗೆ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟಿದ್ದಾರೆ. ಶ್ರಾವಣ ಮಂಗಳವಾರದ ಶುಭದಿನದಂದೇ ಫ್ಯಾನ್ಸಿ ಸ್ಟೋರ್ಗೆ ಪೂಜೆ ಮಾಡಿ ಚಾಲನೆ ನೀಡಲಾಗಿದೆ.
ಹತ್ತು ಕಂತಿನ ಹಣವನ್ನ ಕೂಡಿಟ್ಟು ನಮ್ಮ ಅತ್ತೆ-ಮಾವ ನನಗೆ ಅಂಗಡಿ ಹಾಕಿಕೊಟ್ಟಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯರು ಕೂಲಿ ಕೆಲಸ ಹಾಗೂ ಹೊಲಕ್ಕೆ ಹೋಗಬೇಕು. ಗೃಹಲಕ್ಷ್ಮಿ ಹಣದಿಂದ ಅಂಗಡಿ ಪ್ರಾರಂಭವಾಗಿದೆ ಎಂದು ಸೊಸೆ ಭಾವುಕರಾಗಿ ಹೇಳಿದ್ದಾರೆ. ಅತ್ತೆಯ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.