ತುಮಕೂರು: ಬಿಜೆಪಿ ಹಿರಿಯ ನಾಯಕ ವಿ. ಸೋಮಣ್ಣ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಈ ವೇಳೆ ಅವರು ತಮ್ಮ ಸೋಲಿನ ಕಹಿಯನ್ನು ಸ್ವಾಮೀಜಿಯೊಂದಿಗೆ ಹಂಚಿಕೊಂಡಿದ್ದಾರೆ.
ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಬಳಿ ನೋವು ಹಂಚಿಕೊಂಡಿದ್ದಾರೆ. ಇಲ್ಲಿ ಬಿಟ್ಟು ಅಲ್ಲಿ ಸ್ಪರ್ಧೆ ಮಾಡಿದ್ದೇ ನನ್ನ ತಪ್ಪು. ಪ್ರಧಾನಿ ಮೋದಿ ಅವರು ದೆಹಲಿಗೆ ಕರೆಯಿಸಿ, ಸ್ಪರ್ಧಿಸುವಂತೆ ಹೇಳಿದರು. ಕೇಂದ್ರ ಗೃಹ ಅಮಿತ್ ಶಾ (Amith Shah) ನಮ್ಮ ಮನೆಯಲ್ಲಿ ಎರಡು ಗಂಟೆ ಕುಳಿತು ನನ್ನ ಜೀವ ಕಳೆದರು ಎಂದು ಹೇಳಿದರು.
ಸಿದ್ಧಗಂಗಾ ಮಠಕ್ಕೆ ವಿ ಸೋಮಣ್ಣ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಕೂಡ ಮಠಕ್ಕೆ ಬಂದಿದ್ದರು. ಜಿ.ಎಸ್ ಬಸವರಾಜು ಅವರನ್ನು ಗುರುಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಸೋಮಣ್ಣ ಆಹ್ವಾನಿಸಿದರು.