ಬೆಂಗಳೂರು: 135 ಕೋಟಿ ಭಾರತೀಯರ ನಿದ್ದೆಗೆಡಿಸಿರುವ ಹೆಮ್ಮಾರಿ ಕೊರೊನಾಗೆ ಸಂಕ್ರಾಂತಿಗೆ ಮೊದಲೇ ಮದ್ದು ವಿತರಣೆಯಾಗಲಿದೆ. ಮುಂದಿನ 10 ದಿನಗಳಲ್ಲಿ ದೇಶಾದ್ಯಂತ ಕೊರೊನಾ ಲಸಿಕೆ ವಿತರಣೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮುಂದಿನ ವಾರ ಆರೋಗ್ಯ ಇಲಾಖೆ ದಿನಾಂಕ ಪ್ರಕಟಿಸುವ ಸಾಧ್ಯತೆ ಇದ್ದು, ಅಂದರೆ ಸಂಕ್ರಾಂತಿಯ ಮುನ್ನಾ ದಿನ ಅಂದರೆ ಜನವರಿ 13ರಂದು ದೇಶಾದ್ಯಂತ ಕೊರೊನಾಗೆ ಲಸಿಕೆ ವಿತರಣೆ ಆರಂಭವಾಗಲಿದೆ ಎನ್ನಲಾಗಿದೆ.
| ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564 |
ಕೊರೊನಾ ಲಸಿಕೆ ವಿತರಣೆಗೆ ಕಾರ್ನಾಲ್, ಮುಂಬೈ, ಹೈದರಾಬಾದ್, ಹಾಗೂ ಚೆನ್ನೈ ಸೇರಿದಂತೆ ನಾಲ್ಕು ಕೇಂದ್ರ ಗುರುತಿಸಲಾಗಿದೆ. ನಾಲ್ಕು ಕೇಂದ್ರಗಳಲ್ಲಿ ಸಗಟು ರೂಪದಲ್ಲಿ ಲಸಿಕೆಗಳನ್ನು ಸಂಗ್ರಹಿಸಿ, ಅಲ್ಲಿಂದ ಸಮೀಪದ ರಾಜ್ಯಗಳಿಗೆ ಲಸಿಕೆ ವಿತರಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷನ್ ತಿಳಿಸಿದ್ದಾರೆ.

ಹೆಲ್ತ್ ವಾರಿಯರ್ಸ್‍ಗೆ ಮೊದಲ ಲಸಿಕೆ
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯರ್ತರಿಗೆ ಲಸಿಕೆ ನೀಡಲಾಗುತ್ತಿದೆ. ವೈದ್ಯರು, ನರ್ಸ್ ಸೇರಿದಂತೆ ಹೆಲ್ತ್ ವಾರಿಯರ್ಸ್‍ಗೆ ಮೊದಲ ಹಂತದಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಲಸಿಕೆ ಪಡೆಯುವ ಹೆಲ್ತ್ ವಾರಿಯರ್ಸ್‍ಗಳು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಉಳಿದವರು ಕೋ-ವಿನ್ ವ್ಯಾಕ್ಸಿನ್ ವೆಬ್‍ಸೈಟ್‍ನಲ್ಲಿ ಲಾಗಿನ್ ಆಗಿ, ಹೆಸರು, ವಿಳಾಸ, ಫೋಟೊ, ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಕೋ-ವಿನ್‍ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ.
ಮೊದಲು ಡೋಸ್ ಕೋವಿಶೀಲ್ಡ್, ನಂತರ ಕೊವ್ಯಾಕ್ಸಿನ್..
ಕೊರೊನಾ ಲಸಿಕೆ ಹಂಚಿಕೆಗೆ ದೇಶಾದ್ಯಂತ ಸಿದ್ಧತೆ ನಡೆದಿದ್ದು, ಮೊದಲ ಹಂತದಲ್ಲಿ ಅಸ್ತ್ರಜೆನಿಕಾ ಹಾಗೂ ಆಕ್ಸ್‍ಫರ್ಡ್ ವಿವಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯ ಡೋಸ್ ನೀಡಲು ನಿರ್ಧರಿಸಲಾಗಿದೆ. ಎರಡನೇ ಡೋಸ್‍ಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದೆ.

| ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564. |
ಮೊದಲೇ ನಿಗಧಿ ಮಾಡಿಕೊಂಡ ಲಸಿಕಾ ಕೇಂದ್ರಗಳಿಗೆ ಲಸಿಕೆ ವಿತರಣೆ ಮಾಡಲಾಗುವುದು. ಲಸಿಕೆ ಡೋಸ್ ನೀಡುವ ಮೊದಲು ರಿಜಿಸ್ಟ್ರೇಷನ್ ವಿಭಾಗದಲ್ಲಿ ಲಸಿಕೆ ಪಡೆಯುವವರ ಹೆಸರನ್ನು ನೋಂದಾಯಿಸಿಕೊಳ್ಳಲಾಗುತ್ತದೆ.
2ನೇ ಹಂತದಲ್ಲಿ ನೋಂದಣಿ ಮಾಡಿಕೊಂಡವರನ್ನು ವಿಶ್ರಾಂತಿ ಪಡೆಯಲು ಬಿಡಲಾಗುತ್ತದೆ.
3ನೇ ಹಂತದಲ್ಲಿ ಲಸಿಕೆಯ ಡೋಸ್ ನೀಡಲಾಗುತ್ತದೆ
ನಾಲ್ಕನೇ ಹಂತದಲ್ಲಿ ಲಸಿಕೆ ಪಡೆದವರ ಮೇಲೆ 30 ನಿಮಿಷ ನಿಗಾ ಇಡಲಾಗುತ್ತದೆ. 30 ನಿಮಿಷಗಳ ಅವಧಿಯಲ್ಲಿ ಯಾವುದೇ ಅಡ್ಡ ಪರಿಣಾಮ, ಆರೋಗ್ಯದಲ್ಲಿ ವೆತ್ಯಾಸ ಕಂಡು ಬರದಿದ್ದರೆ ಮನೆಗೆ ಕಳಿಸಿಕೊಡಲಾಗುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








