90 ಹೊಡಿ ಮನೇಗ್ ನಡಿ…. 500ನೇ ಸಿನಿಮಾಗೆ ನಾಯಕರಾದ ವೈಜನಾಥ ಬಿರಾದರ್..!

1 min read

90 ಹೊಡಿ ಮನೇಗ್ ನಡಿ…. 500ನೇ ಸಿನಿಮಾಗೆ ನಾಯಕರಾದ ವೈಜನಾಥ ಬಿರಾದರ್..!

ಸ್ಯಾಂಡಲ್ ವುಡ್ ಹಿರಿಯ ನಟ ವೈಜನಾಥ ಬಿರಾದರ್ ಅವರು ಕನ್ನಡ ಸಿನಿಮಾರಂದಲ್ಲಿ ಅನೇಕ ಸಿನಿಮಾಗಳನ್ನ ನಟಿಸಿ ತಮ್ಮ ವಿಭಿನ್ನ ನಟನಾ ಶೈಲಿಯಿಂದಲೇ ಗುರುತಿಸಿಕೊಂಡಿದ್ದಾರೆ. ವೈಜನಾಥ ಬಿರಾದರ ಅವರು ಭಿಕ್ಷುಕನ ಪಾತ್ರದಿಂದ ಹಿಡಿದು, ಪೋಷಕ ಪಾತ್ರಗಳು, ಹಾಸ್ಯ ಪಾತ್ರಗಳು, ಗಂಭೀರ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು. ಇಲ್ಲಿವರೆಗೂ ಸುಮಾರು 500 ಸಿನಿಮಾಗಳಲ್ಲಿ ನಟಿಸಿರುವ ಬಿರಾದರ ಅವರು ಇತ್ತೀಚೆಗಷ್ಟೇ ‘ 90 ಹೊಡಿ ಮನೇಗ್ ನಡಿ’ ಎಂಬ ಹಾಸ್ಯಪ್ರಧಾನ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ವಿಶೇಷ ಎಂದ್ರೆ ಇದು ಅವರ ವೃತ್ತಿ ಜೀವನದ 500ನೇ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಅವರು ನಾಯಕನಟನಾಗಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ಅಂದ್ಹಾಗೆ ಬಿರಾದರ್ ಅವರು ಈ ಹಿಂದೆ ಗಿರೀಶ್ ಕಾಸರವಳ್ಳಿ ಆಕ್ಷನ್ ಕಟ್ ಹೇಳಿದ್ದ ‘ಕನಸೆಂಬ ಕುದುರೆಯನೇರಿ’ ಎಂಬ ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾದಲ್ಲಿ ಕುಡಿತದ ವಿರುದ್ಧ ಒಂದೊಳ್ಳೆ ಮೆಸೇಜ್ ಅನ್ನ ಸಮಾಜಕ್ಕೆ ನೀಡೋ ಪ್ರಯತ್ನವೂ ನಡೆದಿದೆ. ಚಿತ್ರದಲ್ಲಿ ಪ್ರಶಾಂತ್ ಸಿದ್ಧಿ, ಅಭಯ್ ವೀರ್, ಸೇರಿದಂತೆ ಅನೇಕ ನಟರು ಬಣ್ಣ ಹಚ್ಚಿದ್ದಾರೆ. ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಸಿನಿಮಾಗೆ ರತ್ನಮಾಲಾ ಬಾದರದಿನ್ನಿ ಅವರು ಬಂಡವಾಳ ಹೂಡಿದ್ದಾರೆ.

ಆ ಡೈರಕ್ಟರ್ ಜೊತೆ ರಶ್ಮಿಕಾ ಚರ್ಚೆ : ಬಾಲಿವುಡ್ ನಲ್ಲಿ ರಶ್ಮಿಕಾ ಸದ್ದು…

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd