ಸುಪ್ರಸಿದ್ಧ ವೈಷ್ಣೋ ದೇವಿ ಮಾತಾ ಯಾತ್ರೆ ಇಂದಿನಿಂದ ಆರಂಭವಾಗಿದೆ. ಸಾವಿರಾರು ಭಕ್ತರು ಮಾತಾ ದರ್ಶನಕ್ಕಾಗಿ ಯಾತ್ರಯನ್ನು ಆರಂಭಿಸಿದ್ದಾರೆ. ಅತ್ಯಂತ ಕಟ್ಟುನಿಟ್ಟಿನ ನಿಯಗಳನ್ನು ದೇವಾಲಯದ ಮಂಡಳಿಯಿಂದ ಅಳವಡಿಸಲಾಗಿದೆ. ಒಂದು ದಿನಕ್ಕೆ 2 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಎರಡು ಸಾವಿರ ಯಾತ್ರಾರ್ಥಿಗಳ ಪೈಕಿ ಜಮ್ಮು-ಕಾಶ್ಮೀರರೇತರ 100 ಮಂದಿಗೆ ಮಾತ್ರ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಕೊರೊನಾ ಹಾವಳಿ ಹಿನ್ನೆಲೆ ಮಾರ್ಚ್ 18ರಂದು ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಬಳಿಕ ಸುಮಾರು 5 ತಿಂಗಳ ನಂತರ ಇಂದಿನಿಂದ ಯಾತ್ರೆ ಪುನರಾರಂಭವಾಗಿದೆ. ಯಾತ್ರೆಯ ವೇಳೆ ಸರ್ಕಾರದ ಮಾರ್ಗಸೂಚಿಯಂತೆ ಯಾತ್ರಾರ್ಥಿಗಳು ಹಲವು ಕ್ರಮಗಳನ್ನು ಅನುಸರಿಸಿದ್ದಾರೆ. ಸರ್ಕಾರ ಈ ಕುರಿತಾದ ಮಾರ್ಗಸೂಚಿಯನ್ನು ಈ ಹಿಂದದೆಯೇ ರಿಲೀಸ್ ಮಾಡಿತ್ತು. ಇದರ ಅನ್ವಯ ಎಲ್ಲಾ ಯಾತ್ರಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹತ್ತು ವರ್ಷದೊಳಗಿನ ಮಕ್ಕಳಿಗೆ ಯಾತ್ರೆಯಲ್ಲಿ ಭಾಗವಹಿಸುವಂತಿಲ್ಲ. ಹಾಗೆಯೇ ಮಾತಾ ಭವನದಲ್ಲಿ ಭಕ್ತರು ಉಳಿದುಕೊಳ್ಳುವುದನ್ನು ಸಹ ಈ ಬಾರಿ ನಿಷೇಧಿಸಲಾಗಿದೆ.









