ಅಜಿತ್ ನಟನೆಯ ವಲಿಮೈ ಜ.13 ಕ್ಕೆ ರಿಲೀಸ್ ಆಗುತ್ತಾ..?  ಪೋಸ್ಟ್ ಪೋನ್ ಆಗುತ್ತಾ..?

1 min read

ಅಜಿತ್ ನಟನೆಯ ವಲಿಮೈ ಜ.13 ಕ್ಕೆ ರಿಲೀಸ್ ಆಗುತ್ತಾ..?  ಪೋಸ್ಟ್ ಪೋನ್ ಆಗುತ್ತಾ..?

ತಮಿಳಿನ ಸ್ಟಾರ್ ನಟ ಅಜಿತ್ ನಟನೆಯ ಬಹುನಿರೀಕ್ಷೆಯ ‘ವಲಿಮೈ’ ಸಿನಿಮಾ ಜನವರಿ 13 ಕ್ಕೆ ರಿಲೀಸ್ ಆಗಬೇಕಿತ್ತು.. ಆದ್ರೆ ದೇಶದಲ್ಲಿ ಕೋವಿಡ್ ನಿಂದಾಗಿ ನಡೆಯುತ್ತಿರುವ ಬೆಳವಣಿಗೆಗಳನ್ನ ಗಮನಿಸಿದ್ರೆ ಈ ಸಿನಿಮಾ ಕೂಡ RRR ಸಿನಿಮಾದ ಮಾದರಿಯಲ್ಲೇ ಪೋಸ್ಟ್ ಪೋನ್ ಆಗಲಿದೆ ಎನ್ನಲಾಗ್ತಿದೆ..

ಇತ್ತೀಚೆಗೆ ಸಿನಿಮಾದ ನಿರ್ಮಾಪಕ ಬೋನಿ ಕಪೂರ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿ ಸಿನಿಮಾ ಜ.13ಕ್ಕೆ ತಮಿಳು , ತೆಲುಗು , ಹಿಂದಿಯಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದರು.. ಆದ್ರೂ ಕೂಡ ಕೋವಿಡ್ ಹಾವಳಿ ಹೆಚ್ಚಾಗ್ತಲೇ ಇರೋ ಕಾರಣ ಹಲವೆಡೆ ಲಾಕ್ ಡೌನ್ , ವೀಕೆಂಡ್ ಕರ್ಫ್ಯೂ ಜಾರಿಯಾಗ್ತಿದ್ದು , ಥಿಯೇಟರ್ ಗಳಲ್ಲಿ 50 % ಸೀಟಿಂಗ್ ವಿಧಿಸಲಾಗ್ತಿದೆ..

ಅಲ್ಲದೇ ಇದೇ 10 ರಂದು ತಮಿಳು ನಾಡು ಸರ್ಕಾರ ವೀಕೆಂಡ್ ಕರ್ಫ್ಯೂ ಆದೇಶ ಹೊರಡಿಸುವ ಸಾಧ್ಯತೆಯಿರುವುದರಿಂದ ಸಿನಿಮಾ ಪೋಸ್ಟ್ ಪೋನ್ ಆಗುವ ಬಹುತೇಕ ಸಾಧ್ಯತೆಗಳಿವೆ ಎನ್ನಲಾಗ್ತಾಯಿದೆ..   ಬೋನಿ ಕಪೂರ್ ಅವರು ಈ ಹಿಂದೆ ಟ್ವೀಟ್ ಮಾಡಿದ್ದಾಗ ಎಲ್ಲಾ ಸರಿಯಾಗಿಯೇ ಇದ್ರೆ ಇದು ಅಜಿತ್ ಅವರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಎಂದಿದ್ದರು..

ಸದ್ಯಕ್ಕೆ ಸಿನಿಮಾ ಅಂಗಳದಲ್ಲಿ ಕೇಳಿ ಬರುತ್ತಿರುವ ವದಂತಿಗಳ ಪ್ರಕಾರ ಸಿನಿಮಾ ಪೋಸ್ಟ್ ಆಗುವುದು ಬಹುತೇಕ ಖಚಿತವೆನ್ನಲಾಗ್ತಿದೆ.. ಈ ಸಿನಿಮಾಗೆ ಹೆಚ್. ವಿನೋತ್ ಅವರು ಆಕ್ಷನ್ ಕಟ್ ಹೇಳಿದ್ದು, ಟ್ರೇಲರ್ ಯೂಟ್ಯೂಬ್ ನಲ್ಲಿ ಈಗಾಗಲೇ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದು, ಸಿನಿಮಾ ರಿಲೀಸ್ ಗಾಘಿ ಫ್ಯಾನ್ಸ್ ಕಾತರರಾಗಿದ್ದಾರೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd